ಹಾಸ್ಟೆಲ್‌ ವಿದ್ಯಾರ್ಥಿನಿ ಬಾತ್ ರೂಂ ವಿಡಿಯೋ ರೆಕಾರ್ಡ್ ಮಾಡಲು ಯತ್ನ: ಐಐಟಿ ಬಾಂಬೆ ಹಾಸ್ಟೆಲ್ ಕ್ಯಾಂಟೀನ್ ಬಾಯ್ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಹಾಸ್ಟೆಲ್‌ನ ಬಾತ್‌ರೂಮಿನಿಂದ ವಿದ್ಯಾರ್ಥಿನಿಯರ ವೀಡಿಯೊಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಐಐಟಿ ಬಾಂಬೆಯ ಕ್ಯಾಂಟೀನ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಾತ್‌ರೂಮಿನಲ್ಲಿ ಯಾರೋ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದ ವಿದ್ಯಾರ್ಥಿನಿ, ಈ ಬಗ್ಗೆ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಸಿ ಪ್ರಕರಣ ದಾಖಲಾಗಿದೆ.

ಈ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಐಐಟಿ ಬಾಂಬೆ, ಹಾಸ್ಟೆಲ್ ನೈಟ್ ಕ್ಯಾಂಟೀನ್‌ನ ಉದ್ಯೋಗಿಯೊಬ್ಬ ಮಹಿಳಾ ಹಾಸ್ಟೆಲ್‌ನ ವಿದ್ಯಾರ್ಥಿಗಳ ಖಾಸಗಿತನಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದ್ದಾನೆ, ಕ್ಯಾಂಟೀನ್ ಕೆಲಸಗಾರ ಪೈಪ್ ಡಕ್ಟ್ ಹತ್ತಿ ವಿಡಿಯೋ ರೆಕಾರ್ಡ್ ಮಾಡಲು ಯತ್ನಿಸಿದ್ದಾನೆ. ಅಪರಾಧಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದೆ.

ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಇದರಲ್ಲಿ ಸೈಬರ್ ತನಿಖೆಯೂ ನಡೆಸಲಾಗುತ್ತಿದೆ ಎಂದು ಐಐಟಿ ಬಾಂಬೆ ಹೇಳಿಕೆಯಲ್ಲಿ ತಿಳಿಸಿದೆ. ಆರಂಭಿಕ ವರದಿಯ ಪ್ರಕಾರ, ಅಪರಾಧಿಯಿಂದ ವಶಪಡಿಸಿಕೊಂಡ ಫೋನ್‌ನಿಂದ ಯಾವುದೇ ದೃಶ್ಯಗಳನ್ನು ಹಂಚಿಕೊಂಡಿದ್ದರ ಬಗ್ಗೆ ಸಂಸ್ಥೆಗೆ ತಿಳಿದಿಲ್ಲ ಎಂದು ಹೇಳಿದೆ.

ಸದ್ಯ ಕ್ಯಾಂಟೀನನ್ನು ಮುಚ್ಚಲಾಗಿದ್ದು, ಶೀಘ್ರದಲ್ಲೇ ಅದನ್ನು ತೆರೆಯುತ್ತೇವೆ, ಆದರೆ ಕ್ಯಾಂಟಿನಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸಲಿದ್ದಾರೆ .
ಐಐಟಿ ಬಾಂಬೆ ತನ್ನ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯ ಭರವಸೆ ನೀಡಿದ್ದು , ಐಐಟಿ ಬಾಂಬೆ ತನ್ನ ವಿದ್ಯಾರ್ಥಿಗಳೊಂದಿಗೆ ನಿಂತಿದೆ ಮತ್ತು ನಮ್ಮ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಬದ್ದರಾಗಿದ್ದೇವೆ ಎಂದು ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!