SHOCKING VIDEO| ಏರ್ ಬಲೂನ್‌ನಲ್ಲಿ ಬೆಂಕಿ: ಕೆಳಕ್ಕೆ ಬಿದ್ದ ಇಬ್ಬರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಕ್ಸಿಕೋ ನಗರದ ಬಳಿಯ ಪ್ರಸಿದ್ಧ ಟಿಯೋಟಿಹುಕಾನ್ ಪುರಾತತ್ವ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಏರ್ ಬಲೂನ್‌ಗಳಲ್ಲಿ ಏರುವ ಮೂಲಕ ವೈಮಾನಿಕ ನೋಟ ಎಲ್ಲರನ್ನೂ ಆಕರ್ಷಿಸುತ್ತಿದೆ. ಸ್ವಲ್ಪ ದೂರ ಹೋದ ನಂತರ ಬಲೂನಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಅದರಲ್ಲಿದ್ದ ಪ್ರವಾಸಿಗರು ಭಯದಿಂದ ಕೆಳಗೆ ಹಾರಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೆಕ್ಸಿಕನ್ ರಾಜ್ಯ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. ಬಲೂನ್‌ನಿಂದ ಹಾರಿದ ಇಬ್ಬರು ಪ್ರವಾಸಿಗರು  ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೃತರನ್ನು 39 ವರ್ಷದ ಮಹಿಳೆ ಮತ್ತು 50 ವರ್ಷದ ಪುರುಷ ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ, ಅಪ್ರಾಪ್ತ ಬಾಲಕನ ಮುಖದ ಮೇಲೆ ಸುಟ್ಟಗಾಯಗಳು ಉಂಟಾಗಿವೆ ಮತ್ತು ಕೆಳಗೆ ಬಿದ್ದ ಕಾರಣ ಅವನ ಬಲ ಎಲುಬು ಮುರಿದಿದೆ. ಆದರೆ, ಬಲೂನ್‌ನಲ್ಲಿ ಎಷ್ಟು ಪ್ರಯಾಣಿಕರಿದ್ದರು ಎಂಬುದು ಬಹಿರಂಗವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!