ಊಟಕ್ಕೆ ಅತ್ಯಂತ ಪೌಷ್ಟಿಕ ಹಾಗೂ ಸುಲಭವಾಗಿ ಜೀರ್ಣವಾಗುವ ದಾಲಿಯಾ (ಗೋದಿನುಚ್ಚು) ತರಕಾರಿ ಕಿಚಡಿ ತಯಾರಿಸುವ ಸರಳ ವಿಧಾನ ಇಲ್ಲಿದೆ. ಇದು ತೂಕ ಇಳಿಸಲು ಮತ್ತು ಮಧುಮೇಹಿಗಳಿಗೆ ಅತ್ಯುತ್ತಮ ಆಹಾರವಾಗಿದೆ.
ಬೇಕಾಗುವ ಸಾಮಗ್ರಿಗಳು
ಗೋದಿನುಚ್ಚು
ಹೆಸರುಬೇಳೆ
ಕ್ಯಾರೆಟ್
ಬೀನ್ಸ್
ಹಸಿ ಬಟಾಣಿ
ಆಲೂಗಡ್ಡೆ
ಈರುಳ್ಳಿ
ಟೊಮೆಟೊ
ಹಸಿ ಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಜೀರಿಗೆ
ಅರಿಶಿನ ಪುಡಿ
ಗರಂ ಮಸಾಲ ಪುಡಿ
ತುಪ್ಪ ಅಥವಾ ಎಣ್ಣೆ
ನೀರು
ಉಪ್ಪು
ಕೊತ್ತಂಬರಿ ಸೊಪ್ಪು
ತಯಾರಿಸುವ ವಿಧಾನ
ಮೊದಲು ಒಂದು ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ ಗೋದಿನುಚ್ಚನ್ನು ತಿಳಿ ಕಂದು ಬಣ್ಣ ಬರುವವರೆಗೆ 3-4 ನಿಮಿಷ ಹುರಿದು ಪಕ್ಕಕ್ಕೆ ಎತ್ತಿಡಬೇಕು. ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರನ್ನು ಸೋಸಿ ಇಟ್ಟುಕೊಳ್ಳಬೇಕು. ಕುಕ್ಕರ್‌ನಲ್ಲಿ 1 ಚಮಚ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಜೀರಿಗೆ, ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಟೊಮೆಟೊ ಸೇರಿಸಿ, ಟೊಮೆಟೊ ಮೃದುವಾಗುವವರೆಗೆ ಬಾಡಿಸಿ. ಹೆಚ್ಚಿದ ಮಿಶ್ರ ತರಕಾರಿಗಳು, ಅರಿಶಿನ ಪುಡಿ ಮತ್ತು ಬಿಸಿ ಮಸಾಲ ಪುಡಿ ಸೇರಿಸಿ 1 ನಿಮಿಷ ಚೆನ್ನಾಗಿ ಕೈಯಾಡಿಸಿ. ಈಗ ಹುರಿದ ಗೋದಿನುಚ್ಚು ಮತ್ತು ತೊಳೆದ ಹೆಸರುಬೇಳೆಯನ್ನು ಕುಕ್ಕರ್‌ಗೆ ಹಾಕಿ ಮಸಾಲೆಯೊಂದಿಗೆ ಮಿಕ್ಸ್ ಮಾಡಿ. 4 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕೈಯಾಡಿಸಿ, ನೀರನ್ನು ಕುದಿಯಲು ಬಿಡಬೇಕು. ಕುಕ್ಕರ್ ಮುಚ್ಚಳ ಮುಚ್ಚಿ 3 ವಿಸಲ್ ಕೂಗಿಸಿ. ಪ್ರೆಶರ್ ಸಂಪೂರ್ಣವಾಗಿ ಇಳಿದ ನಂತರ ಮುಚ್ಚಳ ತೆಗೆದು. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿ, ಬಿಸಿಬಿಸಿಯಾದ ಕಿಚಡಿಯನ್ನು ಮೊಸರು ಅಥವಾ ಉಪ್ಪಿನಕಾಯಿಯೊಂದಿಗೆ ಸವಿಯಬಹುದು.



