October 12, 2026
Monday, October 12, 2026
spot_img

ಇನ್ಮುಂದೆ ಇಡ್ಲಿಗೆ 90 ರೂಪಾಯಿ, ಮಸಾಲೆ ದೋಸೆಗೆ 150 ರೂಪಾಯಿ, ಎಚ್ಚರಿಕೆ ಕೊಟ್ಟ ಹೊಟೇಲ್‌ ಮಾಲೀಕರ ಸಂಘ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾರ್ಮಿಕರ ಕನಿಷ್ಠ ವೇತನವನ್ನು ಶೇ.60ರಷ್ಟು ಹೆಚ್ಚಿಸಿ ಕರ್ನಾಟಕ ಸರ್ಕಾರ ಆಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ರಾಜ್ಯಾದ್ಯಂತ ಹೊಟೇಲ್‌ಗಳಲ್ಲಿ ದರ ಏರಿಕೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಹೊಟೇಲ್‌ಗಳ ಸಂಘ ಎಚ್ಚರಿಕೆ ನೀಡಿದೆ.

ಕಾರ್ಮಿಕರ ಸರಾಸರಿ ಕನಿಷ್ಠ ವೇತನ ಹೆಚ್ಚಳವು ಸದ್ಯದ ವೇತನಕ್ಕಿಂತ ಸುಮಾರು ಶೇ.60ರಷ್ಟಿದೆ. ಇದು ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ. ಇದೀಗ ಒಂದು ಪ್ಲೇಟ್‌ ಇಡ್ಲಿಗೆ 40-50 ರೂಪಾಯಿ ದರ ಇದೆ, ಇನ್ನು ಮಸಾಲೆ ದೋಸೆಗೆ 80-90 ರೂಪಾಯಿ ಇದೆ. ಆದರೆ ಈ ದರ ಹೆಚ್ಚಳವಾಗುತ್ತದೆ ಎಂದು ಹೊಟೇಲ್‌ಗಳ ಸಂಘ ಎಚ್ಚರಿಕೆ ನೀಡಿದೆ.

ಇಡ್ಲಿ ದರ 90 ರೂಪಾಯಿ ಹಾಗೂ ದೋಸೆಯ ದರ 150 ರೂಪಾಯಿ, ಇನ್ನು ಮೀಲ್ಸ್‌ ದರ 200 ರೂಪಾಯಿ ಹಾಗೂ ನಾನ್‌ವೆಜ್‌ ದರ ಐನೂರು ರೂಪಾಯಿ ತಲುಪಬಹುದು ಎಂದು ಹೇಳಿದ್ದಾರೆ. ಈಗಾಗಲೇ ಸಿಲಿಂಡರ್‌ ದರ ಹೆಚ್ಚಿದೆ, ಈ ಮಧ್ಯೆ ಕಾರ್ಮಿಕರ ಕನಿಷ್ಠ ವೇತನ ಕೂಡ ಹೆಚ್ಚಳವಾಗಿದೆ. ಇದರಿಂದ ಹೊಟೇಲ್‌ ಮಾಲೀಕರಿಗೆ ಹೊಡೆತ ಬೀಳುತ್ತದೆ. ನಾವು ಲಾಭಕ್ಕಾಗಿ ಊಟ ತಿಂಡಿಯ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಸಂಘ ಹೇಳುತ್ತಿದೆ.

Must Read