August 17, 2026
Monday, August 17, 2026
spot_img

ಪಲ್ಯ, ಗ್ರೇವಿ & More 100 | ಹೋಟೆಲ್ ಶೈಲಿಯ ಗಮಗಮಿಸುವ ‘ಕಡ್ಲೆಹಿಟ್ಟು ಪಲ್ಯ’: ಪೂರಿ-ಚಪಾತಿಗೆ ಬೆಸ್ಟ್ ಕಾಂಬಿನೇಷನ್!

ಬಾಂಬೆ ಚಟ್ನಿಎನ್ನುವುದು ದಕ್ಷಿಣ ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಹೋಟೆಲ್‌ಗಳಲ್ಲಿ ಪೂರಿ ಹಾಗೂ ಚಪಾತಿಗೆ ನೀಡಲಾಗುವ ಅತ್ಯಂತ ಜನಪ್ರಿಯ ಮತ್ತು ಬಾಯಿಯಲ್ಲಿ ನೀರೂರಿಸುವ ಸೈಡ್ ಡಿಶ್ ಆಗಿದೆ. ಇದನ್ನು ಕೆಲವು ಕಡೆ ‘ಕಡ್ಲೆಹಿಟ್ಟು ಪಲ್ಯ’ ಅಥವಾ ‘ಪಿಟ್ಲಾ’ ಎಂದೂ ಸಹ ಕರೆಯುತ್ತಾರೆ. ಬೆಳಗಿನ ಅವಸರದ ಸಮಯದಲ್ಲಿ ಯಾವುದೇ ತರಕಾರಿಗಳು ಇಲ್ಲದಿದ್ದಾಗ, ಕೇವಲ 10 ನಿಮಿಷಗಳಲ್ಲಿ ಮಾಡಬಹುದಾದ ರುಚಿಕರ ಹಾಗೂ ಸುಲಭವಾದ ಬ್ರೇಕ್‌ಫಾಸ್ಟ್ ಕಾಂಬಿನೇಷನ್ ಇದಾಗಿದೆ.

ಬೇಕಾಗುವ ಸಾಮಗ್ರಿಗಳು:
ಕಡ್ಲೆಹಿಟ್ಟು
ಈರುಳ್ಳಿ
ಟೊಮೆಟೊ
ಹಸಿ ಮೆಣಸಿನಕಾಯಿ
ಶುಂಠಿ
ಎಣ್ಣೆ
ಸಾಸಿವೆ ಮತ್ತು ಜೀರಿಗೆ
ಕಡ್ಲೆಬೇಳೆ ಮತ್ತು ಉದ್ದಿನಬೇಳೆ
ಅರಿಶಿನ ಪುಡಿ
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು
ನಿಂಬೆ ರಸ
ಉಪ್ಪ
ನೀರು

ಮಾಡುವ ವಿಧಾನ :
ಮೊದಲು ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು ಮತ್ತು 1 ಕಪ್ ನೀರು ಹಾಕಿ, ಗಂಟುಗಳಿಲ್ಲದಂತೆ ಚೆನ್ನಾಗಿ ಬೆರೆಸಿ ಪಕ್ಕಕ್ಕಿಡಬೇಕು. ನಂತರ ಬಾಂಡ್ಲಿಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ ಹುರಿದು, ನಂತರ ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಈರುಳ್ಳಿ ಹಾಕಿ ಈರುಳ್ಳಿ ಸಾಫ್ಟ್ ಆಗುವವರೆಗೆ ಬಾಡಿಸಿ. ಆಮೇಲೆ ಟೊಮೆಟೊ ಮತ್ತು ಅರಿಶಿನ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಉಳಿದ 1 ರಿಂದ 1.5 ಕಪ್ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನೀರನ್ನು ಚೆನ್ನಾಗಿ ಕುದಿಸಬೇಕು. ನೀರು ಕುದಿಯುವಾಗ ಉರಿಯನ್ನು ಸಣ್ಣಗೆ ಮಾಡಿ, ಮೊದಲೇ ಸಿದ್ಧಪಡಿಸಿದ ಕಡ್ಲೆಹಿಟ್ಟಿನ ಮಿಶ್ರಣವನ್ನು ನಿಧಾನವಾಗಿ ಸುರಿಯುತ್ತಾ ಕೈಯಾಡಿಸಿ. ಮಿಶ್ರಣವು ತಕ್ಷಣ ಗಟ್ಟಿಯಾಗಲು ಪ್ರಾರಂಭವಾಗುತ್ತದೆ. ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ 4-5 ನಿಮಿಷ ಕಡ್ಲೆಹಿಟ್ಟಿನ ಹಸಿ ವಾಸನೆ ಹೋಗುವವರೆಗೆ ಬೇಯಿಸಿಕೊಂಡು ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಹಿಂಡಿ ಮಿಕ್ಸ್ ಮಾಡಿದರೆ ಬಿಸಿಬಿಸಿ ಬಾಂಬೆ ಚಟ್ನಿ ಸಿದ್ಧವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !