ಭಾರೀ ಮಳೆಗೆ ಕುಸಿದ ಮನೆ : ಐವರ ರಕ್ಷಣೆ, ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿಯ ಲಾಹೋರಿ ಗೇಟ್ ಪ್ರದೇಶದ ಬಳಿ ಮನೆಯೊಂದು ಕುಸಿದಿದ್ದು, ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ದೆಹಲಿಯ ಐದು ಅಗ್ನಿಶಾಮಕ ವಾಹನಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿವೆ. ಇದುವರೆಗೆ ಐವರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯು ವಾಲ್ಮೀಕಿ ಮಂದಿರ, ಫರ್ಶ್ ಖಾನಾ ಲಾಹೋರಿ ಗೇಟ್ ಬಳಿ ಸಂಜೆ 7:30 ರ ಸುಮಾರಿಗೆ ನಡೆದಿದೆ. ಇನ್ನೂ ಮೂರ್ನಾಲ್ಕು ಮಂದಿ ಅವಶೇಷಗಳೊಳಗೆ ಸಿಲುಕಿದ್ದಾರೆಂದು ಅಗ್ನಿಶಾಮಕ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್) ಕೂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 74 ಮಿಮೀ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!