April 17, 2026
Friday, April 17, 2026
spot_img

ಇಂದಿನಿಂದ ಮನೆ ಮನೆ ಜನಗಣತಿ ಆರಂಭ, ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದಿನಿಂದ ಮನೆ ಮನೆ ಗಣತಿ ಆರಂಭವಾಗಲಿದೆ. ಗಣತಿದಾರರು ನಿಮ್ಮ ಮನೆಯ ಬಾಗಿಲಿಗೆ ಬಂದು ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ತೆಗೆದುಕೊಂಡು ಹೋಗಲಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ-2027ರ ಕಾರ್ಯಕ್ಕೆ 23 ಸಾವಿರಕ್ಕೂ ಹೆಚ್ಚು ಗಣತಿದಾರರು, 2900 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.

ಇದು ಮೊದಲನೆಯ ಹಂತದ ಮನೆಗಣತಿಯಾಗಿದೆ. ಈ ಕಾರ್ಯ ಮುಗಿದ ನಂತರ ಮುಂದಿನ ವರ್ಷ ಏಪ್ರಿಲ್‌ನಲ್ಲಿ ಎರಡನೇ ಹಂತ ಆರಂಭವಾಗುತ್ತದೆ. ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕಿದೆ.

ಗಣತಿದಾರರು ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಮನೆ ಗಣತಿ ಮಾಡಲಿದ್ದಾರೆ. ಒಂದು ವಾರ ಕಳೆದ ನಂತರ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಜೆ 6ರಿಂದ ರಾತ್ರಿ 9ರವರೆಗೆ ಹಾಗೂ ಬೆಳಗ್ಗೆ 6 ರಿಂದ ಬೆಳಗ್ಗೆ 10ರವರೆಗೆ ಗಣತಿ ನಡೆಸಲು ವ್ಯವಸ್ಥೆ ಮಾಡಲಾಗುವುದು. ಮನೆ ಗಣತಿ ಕಾರ್ಯದಲ್ಲಿ 26,000 ಸಿಬ್ಬಂದಿಗಳ ಪೈಕಿ 10,000 ಶಿಕ್ಷಕರನ್ನು ನಿಯೋಜಿಸಲಾಗಿದೆ.

ಮನೆ ಗಣತಿ ಕಾರ್ಯಕ್ಕಾಗಿ ನಗರದಲ್ಲಿ 23,000 ಗಣತಿದಾರರನ್ನು ನಿಯೋಜಿಸಲಾಗಿದ್ದು, ಪ್ರತಿಯೊಬ್ಬ ಗಣತಿದಾರರಿಗೆ ಸುಮಾರು 200 ಮನೆಗಳ ಜವಾಬ್ದಾರಿ ನೀಡಲಾಗಿದೆ. ಗಣತಿದಾರರು ಯಾವ ಪ್ರಶ್ನೆ ಕೇಳುತ್ತಾರೆ? ಇಲ್ಲಿದೆ ಮಾಹಿತಿ..

ಕಟ್ಟಡದ ಸಂಖ್ಯೆ, ನೆಲ, ಗೋಡೆ ಹಾಗೂ ಛಾವಣಿ ನಿರ್ಮಾಣ ಹೇಗೆ ಆಗಿದೆ? ಸ್ವಂತ ಮನೆಯಾ? ಮನೆಯ ಸ್ಥಿತಿ ಹೇಗಿದೆ? ಕುಟುಂಬದಲ್ಲಿ ಯಾರೆಲ್ಲಾ ಇದ್ದಾರೆ? ಹೆಸರೇನು? ಜಾತಿ ಯಾವುದು? ಎಷ್ಟು ರೂಮಿನ ಮನೆ? ವಿವಾಹಿತರು ಎಷ್ಟಿದ್ದಾರೆ? ನೀರಿನ ಸೌಲಭ್ಯ ಇದೆಯಾ? ಬೆಳಕು ಬರುತ್ತದಾ? ಬಾತ್‌ರೂಮ್‌ ಇದೆಯಾ? ಅಡುಗೆಮನೆಗೆ ಯಾವ ಇಂಧನ ಬಳಸುತ್ತೀರಿ? ಮನೆಯಲ್ಲಿ ಟಿವಿ, ರೇಡಿಯೋ, ಇಂಟರ್‌ನೆಟ್‌, ಫೋನ್‌, ಲ್ಯಾಪ್‌ಟಾಪ್‌ ಇದೆಯಾ? ಮನೆಯಲ್ಲಿ ಯಾವ ವಾಹನ ಇದೆ? ಯಾವ ಧಾನ್ಯದಲ್ಲಿ ಹೆಚ್ಚು ಅಡುಗೆ ಆಗುತ್ತದೆ? ಫೋನ್‌ ನಂಬರ್‌ ಎಲ್ಲವನ್ನೂ ಕೇಳುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !