ಜೋಶಿಮಠದ ಜನರಿಗೆ ತಪ್ಪದ ಸಂಕಷ್ಟ: ಸಿಂಘಧಾರ್‌ನಲ್ಲಿ ಮನೆ, ದೇವಸ್ಥಾನ ಕುಸಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೋಶಿಮಠದ ಸಿಂಘಧಾರ್‌ನಲ್ಲಿ, ಜನವರಿ 2 ಮತ್ತು 3 ರ ಮಧ್ಯರಾತ್ರಿಯಲ್ಲಿ ಹಲವಾರು ಮನೆಗಳು ಕುಸಿದಿವೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ. ಆದರೆ, ಈ ಘಟನೆಗಳಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ ಎನ್ನಲಾಗಿದೆ. ಹಲವಾರು ಮನೆಗಳು ಮತ್ತು ಹತ್ತಿರದ ದೇವಸ್ಥಾನದಲ್ಲಿ ಬಿರುಕು ಕಾಣಿಸಿ ಕುಸಿದಿರುವುದಾಗಿ ತಿಳಿಸಿದೆ.

ಈ ಕುರಿತು ಸ್ಥಳೀಯರೊಬ್ಬರು ಎಎನ್‌ಐಗೆ ಮಾತನಾಡಿ, ನಾವು ಮಲಗಿದ್ದಾಗ ಸುಮಾರು 2.30ರ ಸಮಯದಲ್ಲಿ ಗೋಡೆಗಳ ಮೇಲಿನ ಬಿರುಕುಗಳು ತೆರೆದುಕೊಂಡಂತೆ ಮತ್ತು ಕಾಂಕ್ರೀಟ್ನ ದೊಡ್ಡ ತುಂಡೊಂದು ಕೆಳಗೆ ಬಿದ್ದ ಶಬ್ದವನ್ನು ಕೇಳಿದ್ದೇವೆ. ಆ ರಾತ್ರಿಯೆಲ್ಲಾ ಸೂರಿಲ್ಲದೆ ಆಕಾಶ ನೋಡುತ್ತಾ ಕಾಲ ಕಳೆದೆವು ಮರುದಿನ ನಮ್ಮನ್ನು ಹತ್ತಿರದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಯಿತು ಎಂದರು.

ಪ್ರಮುಖ ದಾಖಲೆಗಳು ಮತ್ತು ಗೃಹೋಪಯೋಗಿ ವಸ್ತುಗಳು ನಾಶವಾಗಿವೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದರು. ಎರಡು ದಿನಗಳ ಅವಧಿಯಲ್ಲಿ ಅಂದರೆ ಜನವರಿ 2 ಮತ್ತು 3 ರಂದು ನಮ್ಮ ಮನೆ ಹಾಗೂ ಇತರೆ ಮನೆಗಳು ಕುಸಿದು ಬಿದ್ದಿವೆ. ಹತ್ತಿರದ ದೇವಸ್ಥಾನವೂ ಕುಸಿದು ನಾವು ನಮ್ಮ ದನಗಳನ್ನು ಕಳೆದುಕೊಂಡಿದ್ದೇವೆ. ನನ್ನ ಇಬ್ಬರು ಪುತ್ರರೂ ಈಗ ನಿರುದ್ಯೋಗಿಯಾಗಿದ್ದಾರೆ ಎಂದು ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!