October 10, 2026
Saturday, October 10, 2026
spot_img

ವಾಶಿಂಗ್‌ ಮಶೀನ್‌ ಸ್ವಿಚ್‌ ಹಾಕುವಾಗ ಗೃಹಿಣಿ ಸಾವು, ಇದು ಕೊಲೆ ಎಂದು ಆರೋಪಿಸಿದ ಪೋಷಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಾಶಿಂಗ್‌ ಮಶೀನ್‌ ಬಳಸುವಾಗ ವಿದ್ಯುತ್‌ ಸ್ಪರ್ಶಿಸಿ ಗೃಹಿಣಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿಯಲ್ಲಿ ನಡೆದಿದೆ.

ಮೂವತ್ತು ವರ್ಷದ ಸುಜಾತ ಮೃತರು. ಮಗಳನ್ನು ಗಂಡನ ಮನೆಯಲ್ಲಿ ಕೊಲೆ ಮಾಡಲಾಗಿದೆ. ಇದು ಆಕಸ್ಮಿಕ ಅಲ್ಲ ಎಂದು ಸುಜಾತ ಪೋಷಕರು ಆರೋಪಿಸಿದ್ದಾರೆ.

ಬೆಳಗ್ಗೆ ಬಟ್ಟೆ ತೊಳೆಯೋದಕ್ಕೆ ಸುಜಾತ ಸ್ವಿಚ್‌ ಹಾಕುತ್ತಿದ್ದಂತೆಯೇ ಶಾಕ್‌ ಹೊಡೆದು ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಸುಜಾತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಸುಜಾತಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ತುಮಕೂರು ನಿವಾಸಿಗಳಾದ ಪಾಂಡುರಂಗಯ್ಯ ಹಾಗೂ ಭಾಗ್ಯಮ್ಮ ತಮ್ಮ ಮಗಳನ್ನು ಹತ್ತು ವರ್ಷದ ಹಿಂದೆ ರಿಯಲ್‌ ಎಸ್ಟೇಟ್‌ ಉದ್ಯಮಿ ಚೇತನ್‌ಗೆ ಧಾರೆ ಎರೆದು ಕೊಟ್ಟಿದ್ದರು. ಆದರೆ ದಂಪತಿ ಮಧ್ಯೆ ನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕೆಲ ತಿಂಗಳ ಹಿಂದೆ ಸುಜಾತ ಚೇತನ್‌ ಕಾಟ ತಾಳಲಾರದೆ ಒಂದು ತಿಂಗಳು ತವರು ಮನೆಯಲ್ಲಿಯೇ ಇದ್ದರು. ಒಂದು ವಾರದ ಹಿಂದಷ್ಟೇ ಚೇತನ್‌ ಮಗಳನ್ನು ಕರೆದುಕೊಂಡು ಹೋಗಿದ್ದ. ಹೋಗಿ ಒಂದೇ ವಾರಕ್ಕೆ ಆಕಸ್ಮಿಕ ಸಾವು ಎಂದರೆ ನಂಬೋಕೆ ಸಾಧ್ಯವಿಲ್ಲ ಎಂದು ಹೆತ್ತವರು ಕಣ್ಣೀರು ಹಾಕಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ಕಳುಹಿಸಲಾಗಿದೆ.

Must Read