ಆರ್ಥಿಕ ಆತಂಕಗಳ ನಡುವೆ ಯುರೋ ಮತ್ತು ಡಾಲರ್‌ ಕ್ಷಮತೆ ಹೇಗಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತಿಚಿಗೆ ಜಾಗತಿಕವಾಗಿ ಹೆಚ್ಚಾಗುತ್ತಿರುವ ಜಾಗತಿಕ ಆರ್ಥಿಕ ಆತಂಕಗಳ ನಡುವೆ ಯುರೋ ಮತ್ತು ಡಾಲರ್‌ ಕರೆನ್ಸಿಗಳು ಒಂದೇ ಮೌಲ್ಯ ದಾಖಲಿಸಿವೆ. 2003ರಿಂದ ಡಾಲರ್‌ ಗಿಂತ ಬಲವಾಗಿರುವ ಯುರೋಗೆ ಈ ಬೆಳವಣಿಗೆ ಪೂರಕವಾದುದಲ್ಲ.

ಹೂಡಿಕೆದಾರರು ಯುರೋಪ್‌ನಲ್ಲಿ ಉಂಟಾಗುತ್ತಿರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಚಿಂತಿತರಾಗಿದ್ದಾರೆ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು ನಿಧಾನ ಗತಿಯಲ್ಲಿ ಏರಿಕೆ ಮಾಡುತ್ತಿದೆ. ಉಕ್ರೇನ್‌ ಮೇಲಿನ ಆರ್ಥಿಕ ನಿರ್ಬಂಧಗಳ ನಂತರ ರಷ್ಯಾವು ನೈಸರ್ಗಿಕ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸುವ ಬೆದರಿಕೆ ಹಾಕುತ್ತಿದೆ. ಇದರಿಂದ ಯುರೋಪ್‌ ಗೆ ಇಂಧನ ಭದ್ರತೆಯ ಸಮಸ್ಯೆ ಎದುರಾಗಿದೆ. ಹಾಗಾಗಿ ಯುರೋಪ್‌ ಹೊಸ ತೈಲ ಮೂಲಗಳನ್ನು ಹುಡುಕಲು ತನ್ನ ರಾಷ್ಟ್ರಗಳಿಗೆ ಒತ್ತಾಯಿಸುತ್ತಿದೆ.

ಒಂದೆಡೆ ಆರ್ಥಿಕ ಹಿಂಜರಿತದ ಭಯವು ಯುರೋ ಕುಸಿತಕ್ಕೆ ಕಾರಣವಾಗಿದ್ದರೆ ಡಾಲರ್‌ ಏರಿಕೆಯಾಗುತ್ತಿದೆ. ಇದರ ಹಿಂದಿನ ಕಾರಣವೆಂದರೆ ಭದ್ರತೆ. ಅನೇಕ ಹೂಡಿಕೆದಾರರು ಆರ್ಥಿಕ ಅನಿಶ್ಚಿತತೆಯ ಸಂದರ್ಭದಲ್ಲಿ ಡಾಲರ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ. ಡಾಲರ್‌ ಸ್ವತ್ತುಗಳು ಹೆಚ್ಚು ಸುರಕ್ಷಿತವೆಂಬ ಭಾವನೆ ಹೂಡಿಕೆದಾರರಲ್ಲಿದೆ. ಆದ್ದರಿಂದ ಡಾಲರ್‌ ಗೆ ಬೇಡಿಕೆ ಹೆಚ್ಚಾಗಿರುವುದು ಅದರ ಮೌಲ್ಯದ ಹೆಚ್ಚಳಕ್ಕೂ ಕಾರಣವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!