ಒಬ್ಬ ವ್ಯಕ್ತಿಗೆ ಯಾರ ಮೇಲೂ ದ್ವೇಷ ಇಲ್ಲದಿರೋಕೆ ಹೇಗೆ ಸಾಧ್ಯ?

ಹಳ್ಳಿಯಲ್ಲಿ ಒಬ್ಬ ವ್ಯಕ್ತಿಯಿದ್ದ. ಆತ ಸದಾ ಹಸನ್ಮುಖಿ. ಎಲ್ಲರ ಜೊತೆ ನಗುತ್ತಲೇ ಮಾತನಾಡುತ್ತಿದ್ದ. ಅಷ್ಟೇ ಅಲ್ಲದೆ ಒಂದು ದಿನವೂ ಆತ ಯಾರ ಮೇಲೂ ರೇಗಿದ್ದನ್ನು ಕಂಡಿಲ್ಲ. ಇಷ್ಟೆಲ್ಲಾ ಸಾತ್ವಿಕ ಗುಣ ಒಂದೇ ವ್ಯಕ್ತಿಯಲ್ಲಿ ಇರಲು ಹೇಗೆ ಸಾಧ್ಯ?

ಆ ವ್ಯಕ್ತಿಯ ಪಕ್ಕದ ಮನೆಗೆ ನೆಂಟರು ಬಂದಿದ್ದರು. ಅಲ್ಲಿ ಈ ವ್ಯಕ್ತಿ ಬಗ್ಗೆ ಮಾತನಾಡುತ್ತಾ ತಿಳಿಯಿತು. ಈತನನ್ನು ಮಾತನಾಡಿಸಲು ಆ ವ್ಯಕ್ತಿ ಬಂದ. ನಿಮ್ಮ ಬಗ್ಗೆ ಕೇಳಿದೆ. ನಿಮಗೆ ಕೋಪ ಬರೋದಿಲ್ಲ, ಯಾರ ಮೇಲೂ ದ್ವೇಷ ಇಲ್ಲ, ಯಾರಿಗೂ ನಿಮ್ಮ ಮೇಲೆ ಅಸಮಾಧಾನ ಇಲ್ಲ. ನೀವು ಸಾಧು ಸಂತನೂ ಅಲ್ಲ. ಇಷ್ಟೆಲ್ಲಾ ಹೇಗೆ ಸಾಧ್ಯ ಎಂದು ಕೇಳಿದ.

ಅದಕ್ಕೆ ವ್ಯಕ್ತಿ ನಗುತ್ತಾ, ನಾನು ಯಾವ ಸಾತ್ವಿಕ ವ್ಯಕ್ತಿ ಅಲ್ಲ. ಮಾಮೂಲಿ ಮನುಷ್ಯ ಅಷ್ಟೆ. ಮೊದಲು ನಿಮ್ಮ ಜೀವನವನ್ನು, ವ್ಯಕ್ತಿತ್ವವನ್ನು ನೀವು ಒಪ್ಪಿಕೊಳ್ಳಿ. ನಿಮ್ಮನ್ನು ಜನ ಹೇಗೆ ನಡೆಸಿಕೊಳ್ಳಬೇಕು ಎಂದು ಅಪೇಕ್ಷೆ ಪಡುತ್ತೀರೋ, ಅದೇ ರೀತಿ ನಡೆದುಕೊಂಡರೆ ಸಾಕು ಎಂದರು.

ಮೊದಲು ನಿಮ್ಮನ್ನು ನೀವು ತಿದ್ದಿಕೊಳ್ಳಿ. ನಂತರ ಬೇರೆಯವರ ಮೇಲೆ ಬೊಟ್ಟು ತೋರಿಸಿ. ನಿಮ್ಮಿಂದ ನೀವು ಖುಷಿಯಾಗಿದ್ದರೆ ಜಗತ್ತು ಖುಷಿಯಾಗಿರುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!