ಅಡಿಲೇಡ್ ಇಂಟರ್ ನ್ಯಾಷನಲ್ ಟೆನಿಸ್ ಕೂಟ: ಸೆಮಿ ಫಿನಾಲೆ ತಲುಪಿದ ಸಾನಿಯಾ ಮಿರ್ಜಾ-ನಾದಿಯ ಜೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡಿಲೇಡ್ ಇಂಟರ್ ನ್ಯಾಷನಲ್ ಟೆನಿಸ್ ಕೂಟದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಉಕ್ರೀನಿನ ನಾದಿಯ ಕಿಚೆನೊಕ್ ಜೋಡಿ ಸೆಮಿ ಫಿನಾಲೆ ತಲುಪಿದ್ದಾರೆ.
ಗುರುವಾರ ನಡೆದ ಕ್ವಾರ್ಟರ್ ಫಿನಾಲೆಯಲ್ಲಿ ಅಮೆರಿಕದ ಶೆಲ್ಬಿ ರೋಜರ್ಸ್ ಮತ್ತು ಗ್ರೇಟ್ ಬ್ರಿಟನ್ ನ ಹೀದರ್ ವ್ಯಾಟ್ಸನ್ ರನ್ನು ಸೋಲಿಸಿ ಭಾರತ- ಉಕ್ರೇನ್ ನ ಜೋಡಿ ಸೆಮಿ ಫೈನಲ್ಸ್ ಪ್ರವೇಶಿಸಿದೆ.
55 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫಿನಾಲೆಯಲ್ಲಿ ಸಾನಿಯಾ ಹಾಗೂ ನಾದಿಯಾ ಜೋಡಿ 6-0, 1-6, 10-5 ಅಂತರದಿಂದ ಜಯಗಳಿಸಿದ್ದಾರೆ.
ಇನ್ನು ಸೆಮಿ ಫೈನಲ್ಸ್ ನಲ್ಲಿ ಈ ಜೋಡಿ ಆಸ್ಟ್ರೇಲಿಯಾದ ಆಶ್ಲೀ ಬಾರ್ಟಿ ಮತ್ತು ಸ್ಟಾರ್ಮ್ ಸ್ಯಾಂಡರ್ಸ್ ಎದುರು ಮುಖಾಮುಖಿಯಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!