ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಶಾಂತ್ ಇದೀಗ ಬಹುಬೇಡಿಕೆಯ ನಿರ್ದೇಶಕ ಕೆಜಿಎಫ್ ಮೂಲಕ ಮನೆ ಮಾತಾಗಿರುವ ಪ್ರಶಾಂತ್ ನೀಲ್ ಜತೆ ಕೆಲಸ ಮಾಡಲು ಸಾಕಷ್ಟು ಸ್ಟಾರ್ ಹೀರೋಗಳು ಇಷ್ಟಪಟ್ಟಿದ್ದಾರೆ.
ನೂರು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತಿದ್ದ ಕನ್ನಡ ಸಿನಿಮಾಗಳು ನೀಲ್ ಬಂದ ನಂತರ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ.
ಪ್ರಭಾಸ್ ನಟನೆಯ ಸಲಾರ್‌ನಲ್ಲಿ ನೀಲ್ ಬ್ಯುಸಿ ಇದ್ದಾರೆ. ಆದರೆ ಇದೀಗ ನಿರ್ಮಾಪಕರು ನೀಲ್ ಕಾಲ್‌ಶೀಟ್ ಹಿಡಿಯಲು ಕಾಯುತ್ತಿದ್ದು, ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಬಜೆಟ್ 1000 ಕೋಟಿ ರೂಪಾಯಿ ಎನ್ನಲಾಗಿದೆ.
ನಿರ್ಮಾಪಕ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದು, ಪೌರಾಣಿಕ ಸಿನಿಮಾವೊಂದಕ್ಕೆ 1000 ಕೋಟಿ ರೂಪಾಯಿ ಬಂಡವಾಳ ಹಾಕೋಕೆ ರೆಡಿಯಾಗಿದ್ದಾರೆ. ಸಲಾರ್ ನಂತರ ಜ್ಯೂ. ಎನ್‌ಟಿಆರ್ ಜತೆ ಪ್ರಶಾಂತ್ ಸಿನಿಮಾ ಮಾಡುತ್ತಿದ್ದು, ಅದರ ನಂತರ ಪೌರಾಣಿಕ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.