ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಯುವತಿಯೊಬ್ಬಳು ತನ್ನದೇ ಎಕ್ಸ್‌ಬಾಯ್‌ಫ್ರೆಂಡ್ ಮೇಲೆ ಆತನ ಮದುವೆ ದಿನವೇ ಆಸಿಡ್ ದಾಳಿ ಮಾಡಿದ್ದಾಳೆ.
ದುಮರಿ ಗ್ರಾಮದಲ್ಲಿ ರಾಕೇಶ್ ಬಿಂದ್ ಎನ್ನುವವರ ಮದುವೆ ಮೆರವಣಿಗೆ ವೇಳೆ ಗರ್ಲ್‌ಫ್ರೆಂಡ್ ವಧುವಿನಂತೆ ಸಿಂಗಾರ ಮಾಡಿಕೊಂಡು ವರನ ಬಳಿ ಬಂದಿದ್ದಾಳೆ.
ನಂತರ ರಾಕೇಶ್ ನನ್ನ ಹುಡುಗ ಯಾರೂ ನನ್ನನ್ನು ಅವನಿಂದ ಬೇರೆ ಮಾಡೋಕೆ ಆಗೋದಿಲ್ಲ ಎಂದಿದ್ದಾಳೆ. ಅದಕ್ಕೆ ರಾಕೇಶ್ ವಿರೋಧ ವ್ಯಕ್ತಪಡಿಸಿದ್ದು, ತಕ್ಷಣ ಆಸಿಡ್ ಎರಚಿದ್ದಾಳೆ.
ವರನಿಗೆ ಸುಟ್ಟ ಗಾಯಗಳಾಗಿದ್ದು, ಆತನ ಅಕ್ಕ ಪಕ್ಕ ಇದ್ದವರಿಗೂ ಸುಟ್ಟ ಗಾಯಗಳಾಗಿವೆ. ಯುವತಿಯನ್ನು ರಾಕೇಶ್ ಸಂಬಂಧಿಕರು ಹಿಡಿದು ಥಳಿಸಿದ್ದಾರೆ. ವರ ಆಸ್ಪತ್ರೆಗೆ ಹೋಗಿ ಬಂದ ನಂತರ ಮತ್ತೆ ಬಂದು ವಧುವಿಗೆ ತಾಳಿ ಕಟ್ಟಿದ್ದಾನೆ.
ಯುವತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
बारात लेकर निकले दूल्हे पर प्रेमिका ने फेंका तेजाब
प्रेमिका को पकड़ कर घर वालों ने की धुनाई
मामला बलिया का है। pic.twitter.com/hz9NmtDqUe
— Priya singh (@priyarajputlive) April 24, 2024