ವೋಟರ್ ID ಇಲ್ವಾ? ಹೆಂಗಪ್ಪಾ ವೋಟ್ ಮಾಡೋದು ಅನ್ನೋ ಚಿಂತೇನಾ? ಈ ದಾಖಲೆಗಳು ಇದ್ರೆ ಸಾಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದ್ದು, ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 26 ರಂದು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಉತ್ತರ ಕರ್ನಾಟಕದ ಉಳಿದ 14 ಕ್ಷೇತ್ರಗಳಿಗೆ ಮೇ 7 ರಂದು ಚುನಾವಣೆ ನಡೆಯಲಿದೆ. ಮತ ಚಲಾಯಿಸಲು ಮತಗಟ್ಟೆಗೆ ಪ್ರವೇಶಿಸುವ ಮತದಾರರು ತಮ್ಮ ಗುರುತನ್ನು ಪರಿಶೀಲಿಸಲು ಚುನಾವಣಾ ಕಾರ್ಯಕರ್ತರಿಗೆ ಫೋಟೋ ಐಡಿಯನ್ನು ಹಾಜರುಪಡಿಸಬೇಕು. ಹಾಗಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು ಮತದಾರರ ಗುರುತಿನ ಚೀಟಿ ಇಲ್ಲದಿದ್ದರೂ ಮತದಾನ ಮಾಡಬಹುದು.

ಆದ್ದರಿಂದ, ಈ ಕೆಳಗಿನ ಗುರುತಿನ ಚೀಟಿ ಮೂಲಕ ಮತದಾನ ಮಾಡಬಹುದು.

ಎಲೆಕ್ಷನ್ ವೋಟರ್ ಐಡಿ ಇಲ್ಲವಾದಲ್ಲಿ ಪರ್ಯಾಯ ದಾಖಲೆಗಳು:

ಆಧಾರ್ ಕಾರ್ಡ್
MNREGA ಜಾಬ್ ಕಾರ್ಡ್
ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‌ಬುಕ್‌ಗಳು
ಕಾರ್ಮಿಕ ಸಚಿವಾಲಯದ ಯೋಜನೆಯ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ.
ಪ್ಯಾನ್ ಕಾರ್ಡ್
NPR ಅಡಿಯಲ್ಲಿ RGI ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‌ಪೋರ್ಟ್
ಭಾವಚಿತ್ರ ಹೊಂದಿರುವ ಪಿಂಚಣಿಯ ದಾಖಲೆ
ಕೇಂದ್ರ / ರಾಜ್ಯ ಸರ್ಕಾರ / ಪಿಎಸ್‌ಯು / ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು
MPಗಳು/MLAಗಳು/MLC ಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಭಾರತ ಸರ್ಕಾರ ನೀಡಿರುವ ವಿಶಿಷ್ಟ ಅಂಗವೈಕಲ್ಯ ID (UDID) ಕಾರ್ಡ್.

ಮತದಾರರ ಗುರುತಿನ ದಾಖಲೆ (ಮತದಾರರ ಚೀಟಿ) ತಪ್ಪಾಗಿದ್ದರೆ ಅಥವಾ ಅವರ ಬಳಿ ಯಾವುದೇ ಗುರುತಿನ ದಾಖಲೆ ಇಲ್ಲದಿದ್ದರೆ, ಅವರು ಭಾರತೀಯ ಆಯೋಗವು ಪರಿಶೀಲಿಸುವ ಮೇಲಿನ ಯಾವುದೇ ದಾಖಲೆಗಳನ್ನು ಸಲ್ಲಿಸುವ ಮೂಲಕ ಮತ ಚಲಾಯಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!