HEALTH | ಸೆಲೆಬ್ರಿಟಿಗಳು ಸದಾ ಕಾಲ ಅಷ್ಟೊಂದು ಫಿಟ್ ಆಗಿರೋದು ಹೇಗೆ? ಇಲ್ಲಿದೆ ಅವರ ಸೀಕ್ರೆಟ್ಸ್..

ಹೆಚ್ಚಿನ ಸೆಲೆಬ್ರಿಟಿಗಳು ಸದಾಕಾಲ ಒಂದೇ ತೂಕದಲ್ಲಿರುತ್ತಾರೆ. ಸದಾ ಆರೋಗ್ಯಕರವಾಗಿರುತ್ತಾರೆ. ಫೀಮೇಲ್ ಸೆಲೆಬ್ರಿಟಿಗಳು ಮಗು ಆದ ಬಳಿಕವೂ ಫಿಟ್ ಆಗಿಯೇ ಇರುತ್ತಾರೆ. ಅವರ ಹೆಲ್ತ್ ಸೀಕ್ರೆಟ್ ಏನು? ಸದಾ ಸಣ್ಣ ಇರೋದಕ್ಕೆ ಏನು ಮಾಡ್ತಾರೆ?

ದಿನಕ್ಕೊಂದು ಬಾರಿ ಮಾತ್ರ ತಮ್ಮಿಷ್ಟದ ಆಹಾರ ಸೇವಿಸ್ತಾರೆ, ಉಳಿದ ಎರಡು ಹೊತ್ತು ಪ್ರೋಟೀನ್ ಶೇಕ್‌ನಲ್ಲಿ ದಿನಕಳೆಯುತ್ತಾರೆ.

ಲೋ ಫ್ಯಾಟ್ ಆಹಾರವನ್ನೇ ಸ್ನಾಕ್ಸ್ ಆಗಿ ಬಳಸ್ತಾರೆ. ಇನ್ನೇನು ಹೊಟ್ಟೆ ಹಸಿವಾಗಲು ಆರಂಭವಾಯಿತು ಎನ್ನುವಂತೆಯೇ ಸ್ನಾಕ್ಸ್ ತಿನ್ನುತ್ತಾರೆ. ತುಂಬಾ ಹಸಿವಾದ ನಂತರ ಸಿಕ್ಕಿದ್ದನ್ನು ತಿನ್ನೋದಿಲ್ಲ.

ಯಾವ ದಿನವೂ ವರ್ಕೌಟ್ ಮಿಸ್ ಮಾಡೋದಿಲ್ಲ. ದಿನಕ್ಕೆ ಎರಡು ಗಂಟೆಯಾದ್ರೂ ಜಿಮ್‌ನಲ್ಲಿ ಎಲ್ಲ ರೀತಿಯ ವರ್ಕೌಟ್ ಮಾಡುತ್ತಾರೆ. ಇದರಿಂದ ಆರೋಗ್ಯವೂ ಚೆನ್ನಾಗಿಯೇ ಇರುತ್ತದೆ.

ರಸ್ತೆ ಬದಿಯ ಆಹಾರ, ಎಣ್ಣೆ ಆಹಾರ, ಮೈದಾ, ಸಕ್ಕರೆ ಯಾವುದನ್ನೂ ಮುಟ್ಟೋದಿಲ್ಲ. ಆರೋಗ್ಯಕರ ಆಹಾರವೇ ಅವರ ಮೊದಲ ಚಾಯ್ಸ್

ಸದಾ ಕಾಲ ಆಕ್ಟೀವ್ ಆಗಿ ಇರುತ್ತಾರೆ. ನೀವೇ ಗಮನಿಸಿ ಫ್ರೀಯಾಗಿ ಕುಳಿತಾಗ ಮಾತ್ರ ಏನಾದರೂ ಜಂಕ್ ಫುಡ್ ತಿನ್ನೋಣ ಎನ್ನುವ ಆಸೆ ಆಗುತ್ತದೆ. ಅವರು ಸದಾ ಬ್ಯುಸಿಯಾಗಿರುತ್ತಾರೆ. ಎಳನೀರು, ಕಬ್ಬಿನ ಜ್ಯೂಸ್ ಕುಡಿಯುತ್ತಾರೆ. ಸಕ್ಕರೆ ಮುಟ್ಟೋದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!