ಸಾಮಾನ್ಯವಾಗಿ ಶಾಸ್ತ್ರ, ಪಾಪ, ಪುಣ್ಯದ ಬಗ್ಗೆ ನಂಬಿಕೆ ಇಡುವವರು ಮನೆಯ ಒಳಗೆ ಚಪ್ಪಲಿಯನ್ನು ಇಟ್ಟುಕೊಳ್ಳೋದಿಲ್ಲ. ಮನೆಯ ಮುಂದೆಯೂ ಚಪ್ಪಲಿ ಬಿಡೋದಿಲ್ಲ.
ಇದನ್ನು ಅಶುಭ ಎಂದು ಭಾವಿಸಲಾಗುತ್ತದೆ, ಚಪ್ಪಲಿಯನ್ನು ಹೇಗೆ ಬೇಕೋ ಹಾಗೆ ಎಸೆದರೆ ಲಕ್ಷ್ಮೀ ದೇವಿಯು ಕೋಪಗೊಂಡು ಆ ಮನೆಯಿಂದ ಹೊರಹೋಗುತ್ತಾಳೆ ಎನ್ನುವ ನಂಬಿಕೆ ಇದೆ. ಶೀಘ್ರದಲ್ಲೇ ಮನೆಯಲ್ಲಿ ಹಣದ ಕೊರತೆ ಉಂಟಾಗಿ ಬಡತನ ಕಾಡುತ್ತದೆ ಎನ್ನಲಾಗುತ್ತದೆ.
ಇಷ್ಟೇ ಅಲ್ಲದೆ ಗೃಹದೋಷಗಳಿಗೂ ಇದು ಕಾರಣ ಎಂದು ನಂಬಲಾಗುತ್ತದೆ. ಹಿಂದಿನ ಕಾಲದಲ್ಲಿ ಚಪ್ಪಲಿಯನ್ನು ಮನೆಯಿಂದ ದೂರ ಇಡುತ್ತಿದ್ದಕ್ಕೆ ಮತ್ತೊಂದು ಕಾರಣವೂ ಇದೆ, ಚಪ್ಪಲಿ ಧರಿಸಿ ಊರೆಲ್ಲಾ ಓಡಾಡಿರುತ್ತೇವೆ, ಕ್ರಿಮಿ ಕೀಟ ಮಲ ಹೀಗೆ ಸಾಲು ಸಾಲು ಸಮಸ್ಯೆಯನ್ನು ಮನೆಗೆ ನಾವೇ ಆಹ್ವಾನಿಸಿದಂತೆ ಆಗುತ್ತದೆ. ಈ ಕಾರಣದಿಂದಲೂ ಮನೆಯ ಒಳಗೆ ಚಪ್ಪಲಿಯನ್ನು ಇಡಲು ಜನರು ಇಷ್ಟಪಡುವುದಿಲ್ಲ.