ಹೊಸದಿಗಂತ ಡಿಜಿಟಲ್ ಡೆಸ್ಕ್:
ನಡುರಸ್ತೆಯಲ್ಲಿ ಯೋಗಾಭ್ಯಾಸ ಮಾಡಿದ ಯುವತಿಗೆ ಗುಜರಾತ್ ಪೊಲೀಸರು ದಂಡ ವಿಧಿಸಿದ್ದಾರೆ. ಫುಟ್ ಪಾತ್ ಮೇಲೆ ಯೋಗ ಮಾಡಿ ವಾಹನ ಸವಾರರಿಗೆ ಅಡ್ಡಯುಂಟುಮಾಡಿದ್ದರಿಂದ ದಂಡ ಕಟ್ಟಿಸಿದ್ದಾರೆ.
ಗುಜರಾತಿನ ನಡು ರಸ್ತೆಯಲ್ಲಿ ದಿನಾ ಪರ್ಮಾರ್ ಎಂಬ ಯುವತಿ ಯೋಗಾಭ್ಯಾಸವು ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡಿತ್ತು. ಜನನಿಬಿಡ ರಸ್ತೆಯಲ್ಲಿ ಯೋಗ ಮಾಡುತ್ತಿರುವ ವಿಡಿಯೋ ಪೊಲೀಸರ ಕಣ್ಣಿಗೆ ಬಿದ್ದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆಕೆಗೆ ಎಚ್ಚರಿಕೆ ನೀಡಿ ಕ್ಷಮೆಯಾಚಿಸುತ್ತಿರುವ ವಿಡಿಯೋವನ್ನು ಗುಜರಾತ್ ಪೊಲೀಸರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಸಾರ್ವಜನಿಕ ಸ್ಥಳಗಳನ್ನು ದುರುಪಯೋಗಪಡಿಸಿಕೊಳ್ಳದೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದರು.