ಹೇಗೆ ಮಾಡೋದು?
ಮೊದಲು ನಿಮ್ಮಿಷ್ಟದ ತರಕಾರಿ ಹಾಗೂ ಬೇಳೆ, ಉಪ್ಪು, ಅರಿಶಿಣ, ಟೊಮ್ಯಾಟೊ, ಈರುಳ್ಳಿ ಹಾಕಿ ಬೇಯಿಸಿ
ನಂತರ ಬೆಂದ ಟೊಮ್ಯಾಟೊ ಹೊರಗೆ ತೆಗೆದುಕೊಳ್ಳಿ. ನಂತರ ಅದಕ್ಕೆ ಖಾರದಪುಡಿ, ಸಾಂಬಾರ್‌ಪುಡಿ, ಕಾಯಿ, ಕೊತ್ತಂಬರಿ ಹಾಗೂ ಬೇಳೆ ಬೇಯಿಸಿದ ನೀರು ಹಾಕಿ ರುಬ್ಬಿ
ನಂತರ ಒಗರಣೆಗೆ ಎಣ್ಣೆ ಸಾಸಿವೆ ಜೀರಿಗೆ ಬೆಳ್ಳುಳ್ಳಿ ಹಾಗೂ ಹಿಂಗ್ ಹಾಕಿ, ನಂತರ ಬೇಯಿಸಿದ ಬೇಳೆ ಹಾಕಿ, ಆಮೇಲೆ ಮಿಕ್ಸಿ ಮಾಡಿದ ಮಸಾಲೆ ಹಾಕಿ ಕುದಿಸಿದ್ರೆ ಸಾಂಬಾರ್ ರೆಡಿ