ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ನಾಳೆ ನೂತನ ಸಂಸತ್ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ.ಅದಕ್ಕೂ ಮುನ್ನ ಸಂಸತ್ ಭವನದ ವೈಭವದ ವಿಡಿಯೋವೊಂದನ್ನು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಸಂಸತ್ ನಮ್ಮ ಹೆಮ್ಮೆ ಎನ್ನುವ ಹ್ಯಾಷ್‌ಟ್ಯಾಗ್‌ನ್ನು ಬಳಕೆ ಮಾಡಿದ್ದಾರೆ.
ಇನ್ನೊಂದು ವಿಶೇಷತೆ ಎನ್ನುವಂತೆ ವಿಡಿಯೋವನ್ನು ನಿಮ್ಮ ಧ್ವನಿ ಬಳಸಿ ಹಂಚಿಕೊಳ್ಳಿ ಎಂದು ಹೇಳಿದ್ದಾರೆ. ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ. ಈ ವಿಡಿಯೋ ಭವ್ಯ ಕಟ್ಟಡದ ನೋಟವನ್ನು ನೀಡುತ್ತದೆ. ಇದನ್ನು ನಿಮ್ಮ ಸ್ವಂತ ಧ್ವನಿಯೊಂದಿಗೆ ಹಂಚಿಕೊಳ್ಳಿ. ಅವುಗಳಲ್ಲಿ ಕೆಲವನ್ನು ನಾನು ಮರು ಟ್ವೀಟ್ ಮಾಡುತ್ತೇನೆ ಎಂದು ಬಳಸಲು ಮರೆಯಬೇಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಾಂಪ್ರದಾಯಕ ಪೂಜೆ ಹಾಗೂ ಪುನಸ್ಕಾರದೊಂದಿಗೆ ನಾಳೆ ಸಂಸತ್ ಭವನ ಉದ್ಘಾಟನೆಯಾಗಲಿದೆ.
https://twitter.com/narendramodi/status/1662069125257269252?s=20