CINE | ‘ದಿ ವ್ಯಾಕ್ಸಿನ್ ವಾರ್’ ಹೇಗಿದೆ? ರಿಲೀಸ್‌ಗೂ ಮುನ್ನ ಸಿನಿಮಾ ನೋಡಿದ ಮಾಧವನ್ ಏನಂದ್ರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿವೇಕ್ ಅಗ್ನಿಹೋದ್ರಿ ನಿರ್ದೇಶನದ ‘ದಿ ಕಾಶ್ಮೀರಿ ಫೈಲ್ಸ್’ ಸದ್ದಿಲ್ಲದೆ ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಕೆಲ ವರ್ಗದ ಜನರಿಗೆ ಸಿನಿಮಾ ಇಷ್ಟವಾದ್ರೆ ಹಲವರಿಗೆ ಇಷ್ಟವಾಗಿರಲಿಲ್ಲ.

ಈ ಮಧ್ಯೆಯೂ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಇದೀಗ ವಿವೇಕ್‌ರ ಮತ್ತೊಂದು ಸಿನಿಮಾ ಇನ್ನೇನು ಒಂದು ತಿಂಗಳಿನಲ್ಲಿ ರಿಲೀಸ್ ಆಗಲಿದೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾವನ್ನು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶಿಸಲಾಗಿದ್ದು, ನಟ ಮಾಧವನ್ ಕೂಡ ಸಿನಿಮಾ ನೋಡಿದ್ದಾರೆ.

ವ್ಯಾಕ್ಸಿನ್ ವಾರ್ ಸಿನಿಮಾ ವೀಕ್ಷಿಸಿದೆ. ಇದು ನಿಜವಾಗಿಯೂ ಅದ್ಭುತವಾದ ಸಿನಿಮಾ. ಭಾರತದ ವೈದ್ಯಲೋಕ ಮಾಡಿದ ತ್ಯಾಗ, ಸಾಧನೆಗಳ ಬಗ್ಗೆ ಹೆಮ್ಮೆಯಾಯಿತು. ಅತ್ಯಂತ ಸವಾಲಿನ ಸಮಯದಲ್ಲಿ ನಮ್ಮ ದೇಶ ವ್ಯಾಕ್ಸಿನ್ ತಯಾರಿಸಿದೆ. ವಿವೇಕ್ ಕಥೆ ಹೇಳುವುದರಲ್ಲಿ ನಿಸ್ಸೀಮರು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದಿದ್ದಾರೆ.

ಕೋವಿಡ್ ಸಮಯದಲ್ಲಿ ಭಾರತದಲ್ಲಿ ಏನೆಲ್ಲಾ ಆಯ್ತು? ಮಹಾಮಾರಿಯನ್ನು ಓಡಿಸಲು ವ್ಯಾಕ್ಸಿನ್ ಕಂಡುಹಿಡಿದ ವೈದ್ಯಕೀಯ ಕ್ಷೇತ್ರದ ಕಥೆ ಇದಾಗಿದೆ. ಅನುಪಮ್ ಖೇರ್, ನಾನಾ ಪಾಟೇಕರ್, ಪಲ್ಲವಿ ಜೋಶಿ, ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿ ಕಾಣಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!