MORNING | ಹೇಗಿದೆ ನಿಮ್ಮ ಮಾರ್ನಿಂಗ್‌ ರೊಟೀನ್‌? ಬೆಳಗ್ಗೆ ಮಾಡುವ ಈ ತಪ್ಪುಗಳಿಂದ ದಿ ಹಾಳಾದೀತು..

ಪ್ರತಿದಿನ ನಾವು ಎದ್ದು ಬೆಳೆಸಿಕೊಳ್ಳುವ ಕೆಲ ಅಭ್ಯಾಸಗಳಿಂದ ನಮ್ಮ ದಿನವೇ ಹಾಳಾಗುತ್ತದೆ. ಯಾವೆಲ್ಲಾ ಅಭ್ಯಾಸಗಳು ನೋಡಿ..

ಅಲಾರಾಂ ಇಟ್ಟು ನಂತರ ಮತ್ತೆ ಸ್ನೂಝ್‌ ಮಾಡಿ ಇನ್ನಷ್ಟು ಮಲಗುವುದು. ಅಲಾರಾಂ ಆಫ್‌ ಮಾಡಿ ಒಂದೈದು ನಿಮಿಷ ಎಂದು ಮತ್ತೆ ಮಲಗದಿರಿ.

ನಿಮ್ಮ ಅಲಾರಾಂ ಶಬ್ದದ ಬಗ್ಗೆಯೂ ಆಲೋಚಿಸಿ, ಹಾರ್ಶ್‌ ಆದ ಸದ್ದು ಇಟ್ಟುಕೊಂಡರೆ ಶಾಕ್‌ನಲ್ಲಿ ಏಳಬೇಕಾಗುತ್ತದೆ. ಕೆಲವರಿಗೆ ಇದರಿಂದ ತಲೆನೋವು ಬರುತ್ತದೆ. ದಿನವಿಡೀ ಇರಿಟೇಟಿಂಗ್‌ ಎನಿಸುತ್ತದೆ.

ನಾಳೆ ಏನು ತಿಂಡಿ? ಎಷ್ಟೊತ್ತಿಗೆ ಹೊರಡಬೇಕು? ಯಾವೆಲ್ಲಾ ವಸ್ತುಗಳನ್ನು ಬ್ಯಾಗ್‌ಗೆ ಹಾಕಿಕೊಳ್ಳಬೇಕು ಎಂದು ಮುಂಚೆಯೇ ಪ್ಲಾನ್‌ ಮಾಡಿ.

ಬೆಳಗ್ಗೆ ಎದ್ದು ನಾರ್ಮಲ್‌ ಸ್ಟೇಜ್‌ಗೆ ಬರೋದಕ್ಕೆ ನಿಮಗೆಷ್ಟು ಸಮಯ ಬೇಕು? ಕೆಲವರು ಎದ್ದೊಡನೆ ಸೀದ ಅಡುಗೆ ಮನೆಗೆ ಹೋಗಿ ಕೆಲಸ ಶುರು ಮಾಡುತ್ತಾರೆ. ಇನ್ನು ಹಲವರು ಎದ್ದು ನಿಧಾನವಾಗಿ ನೀರು ಕುಡಿದು ದಿನ ಶುರು ಮಾಡುತ್ತಾರೆ.

ವರ್ಕೌಟ್‌ ಮಾಡದೇ ಇರುವುದು ತಪ್ಪು, ದೇಹ ಜಡವಾಗುತ್ತದೆ. ಬೆಳಗ್ಗೆ ಎದ್ದು ಅರ್ಧ ಗಂಟೆಯಾದರೂ ವ್ಯಾಯಾಮ ಯೋಗ ಮಾಡಿ, ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಿ.

ಬೆಳಗ್ಗೆ ಎದ್ದ ತಕ್ಷಣ ಬೆಡ್‌ ಮೇಲೆ ಮೊಬೈಲ್‌ ನೋಡುತ್ತಾ ಕೂರಬೇಡಿ, ಬೆಡ್‌ ಮೇಲೆ ಮೊಬೈಲ್‌ ಬ್ಯಾನ್‌ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!