ಖುಷಿ ಎಲ್ಲಿದೆ? ನನ್ನ ಚಿನ್ನದ ಓಲೆ ಇದೆ ಆದರೆ ನನಗೆ ಸರ ಬೇಕು, ಸರ ಕೊಂಡಾಯ್ತು ಈಗ ಬಳೆ ಬೇಕು, ಬಳೆ ಆಯ್ತು ಈಗ ನೆಕ್ಲೇಸ್ ಬೇಕು, ಅದೂ ಆಯ್ತು ಮತ್ತಿನ್ನೇನೋ ಬೇಕು.. ಎಲ್ಲಿಯೂ ತೃಪ್ತಿ ಇಲ್ಲ ಖುಷಿಯೂ ಇಲ್ಲ. ಆದರೆ ಖುಷಿ ಸಿಗಬಹುದೇನೋ ಎನ್ನೋ ಆಸೆಯಷ್ಟೇ. ಆದರೆ ನೀವು ಹುಡುಕುತ್ತಿರುವ ಖುಷಿ ವಸ್ತುಗಳಲ್ಲಿ ಇಲ್ಲ, ನಿಮ್ಮಲ್ಲಿದೆ, ನಿಮ್ಮ ನೆನಪುಗಳಲ್ಲಿದೆ.. ಹೌದು, ಈ ಸಿಂಪಲ್ ವಿಷಯಗಳಲ್ಲಿ ಖುಷಿ ಕಂಡರೆ ಜೀವನ ಸುಲಭವಾದೀತು..
ದಿನಕ್ಕೆ 10 ನಿಮಿಷವಾದ್ರೂ ವ್ಯಾಯಾಮ ಮಾಡಿ, ಕಷ್ಟಪಟ್ಟು ಬೆವರಿಳಿಸಿದ ನಂತರದ ಫೀಲ್ ಅನುಭವಿಸಿದವರಿಗೇ ಗೊತ್ತು.
ಪ್ರತಿದಿನ ಆರು ಗಂಟೆ ನಿದ್ದೆ ಮಾಡ್ತೀರಾ ಎಂದಾದ್ರೆ ಯಾವುದೋ ಒಂದೊಂದು ದಿನ ಎರಡು ಗಂಟೆ ಜಾಸ್ತಿ ನಿದ್ದೆ ಮಾಡಿ ಲಾಟರಿ ಹೊಡೆದಷ್ಟೇ ಖುಷಿಯಾಗುತ್ತದೆ.
ಸಂಶೋಧನೆ ಪ್ರಕಾರ ಆಫೀಸ್‌ಗೆ ತುಂಬಾ ಹತ್ತಿರ ಮನೆ ಅಥವಾ ರೂಮ್ ಮಾಡಿಕೊಂಡವರು, ಅಥವಾ ಮನೆಯಲ್ಲೇ ಕೆಲಸ ಮಾಡೋರು ಹೆಚ್ಚು ಖುಷಿಯಾಗಿ ಇರ‍್ತಾರಂತೆ.
ಸ್ನೇಹಿತರು ಹಾಗೂ ಕುಟುಂಬದ ಜೊತೆ ಕಡಿಮೆ ಸಮಯ ಕಳೆಯಬೇಡಿ, ಟೈಮ್ ಸಿಕ್ಕಾಗೆಲ್ಲ ಅವರ ಜೊತೆ ಇರಿ, ಖುಷಿಯ ಮೂಲ ಅವರೇ.
ಆಗಾಗ ನೈಸರ್ಗಿಕ ತಾಣಗಳಿಗೆ ಭೇಟಿ ನೀಡಿ, ಟ್ರಾವೆಲ್ ಮಾಡಿನೋಡಿ.
ಬೇರೆಯವರಿಗೆ ಸಹಾಯ ಮಾಡಿದ್ರೆ ನಿಮ್ಮ ಗಂಟು ಹೋಗುತ್ತದೆ ಅನ್ನೋ ಭಾವನೆ ಬೇಡ, ನೀವು ಒಳ್ಳೆಯ ವ್ಯಕ್ತಿಯಾಗಿ ಬದಲಾಗಲು ಇನ್ನೊಬ್ಬರಿಗೆ ಸಹಾಯ ಮಾಡಬೇಕು.
ಸದಾ ನಗುತಲಿರಿ, ಹೆಚ್ಚು ನಕ್ಕವರಲ್ಲಿ ಖುಷಿಯ ಹಾರ್ಮೋನ್ ಹೆಚ್ಚು ಉತ್ಪಾದನೆ ಆಗುತ್ತದೆ. ಸದಾ ಖುಷಿಯಿಂದ ಇರುತ್ತಾರೆ.
ನೀವು ಖುಷಿಯಾಗಿ ಇರಬೇಕಂದ್ರೆ ನಿಮ್ಮ ಮೆದುಳು ಖುಷಿಯಾಗಿ ಇರಬೇಕಲ್ವಾ? ಧ್ಯಾನದಿಂದ ಮೆದುಳಿಗೆ ಖುಷಿ.
ಜೀವನಕ್ಕೆ ಚಿರಋಣಿಯಾಗಿರಿ, ಇಂದು ನೀವು ನಡೆಸುತ್ತಿರುವ ಜೀವನಕ್ಕೆ ಯಾರೆಲ್ಲಾ ಕಾರಣಕರ್ತರೋ ಅವರೆಲ್ಲರಿಗೂ ಧನ್ಯರಾಗಿರಿ.
ಕೊರಗಬೇಡಿ, ಮಾಮೂಲಿ ಜೀವನ ಮಾಮೂಲಿ ರೊಟೀನ್ ಎಂದು ದುಃಖ ಬೇಡ, ಒಮ್ಮೆ ಜೀವನ ಆಚೀಚೆ ಆದರೆ ನಾರ್ಮಲ್ ಜೀವನವೇ ಚೆನ್ನಾಗಿತ್ತು ಎನ್ನುವ ಭಾವನೆ ಬಂದೀತು.