ಟ್ವಿಟ್ಟರ್ ನೀಲಿ ಹಕ್ಕಿ ಜಾಗದಲ್ಲಿ ನಾಯಿ ಪ್ರತ್ಯಕ್ಷ: ಟ್ವೀಟಿಗರಿಗೆ ಶಾಕ್ ಕೊಟ್ಟ ಮಸ್ಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟ್ವಿಟ್ಟರ್ ಲೋಗೋವನ್ನು ಅದರ ಮುಖ್ಯಸ್ಥ ಎಲಾನ್‌ ಮಸ್ಕ್‌ ಬದಲಾಯಿಸಿದ್ದು ಲೋಗೋದಲ್ಲಿ ನೀಲಿ ಹಕ್ಕಿಯ ಚಿತ್ರವನ್ನು ನಾಯಿ ಚಿತ್ರದೊಂದಿಗೆ ಬದಲಾಯಿಸಲಾಗಿದೆ. ಪ್ರಸಿದ್ಧ ಸಾಮಾಜಿಕ ಜಾಲತಾಣ ಟ್ವಿಟರ್‌ ಅನ್ನು ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ಸ್ವಾಧೀನ ಪಡಿಸಿಕೊಂಡಾಗಿನಿಂದ ಟ್ವಿಟ್ಟರ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ.

ಐಕಾನಿಕ್ ಬ್ಲೂ ಬರ್ಡ್ ಲೋಗೋವನ್ನು ‘ಡಾಗ್’ ಮೀಮ್ ಚಿತ್ರವನ್ನಾಗಿ ಬದಲಾಯಿಸಲಾಗಿದ್ದು ಈಗಾಗಲೇ ಟ್ವಿಟ್ಟರ್ ವೆಬ್‌ ಸೇರಿದಂತೆ ಹಲವು ಕಡೆಗಳಲ್ಲಿ ಈ ಚಿತ್ರ ಪ್ರದರ್ಶನವಾಗುತ್ತಿದೆ. ಈ ಚಿತ್ರವು ಶಿಬಾ ಇನುವಿನ ಕಾರ್ಟೂನ್‌ ಚಿತ್ರವಾಗಿದ್ದು ಡಾಜ್ ಮೀಮ್‌ ಹೆಸರಿನಲ್ಲಿ ಹಲವಾರು ಸಾಮಾಜಿಕ ಮಾಧ್ಯಮಗಳಲ್ಲಿ ಬಳಸಲ್ಪಡುತ್ತಿದೆ.

ಈ ಡಾಜ್‌ ಮೀಮ್‌ ಚಿತ್ರವನ್ನು 2013ರಲ್ಲಿ ತಮಾಷೆಯಾಗಿ ರಚಿಸಲಾಗಿದೆ. ಎಲಾನ್‌ ಮಸ್ಕ್‌ ಕ್ರಿಪ್ಟೋ ಕರೆನ್ಸಿ ಡಾಜ್‌ ಕಾಯಿನ್‌ ಬೆಂಬಲಿಗರಾಗಿದ್ದಾರೆ. ಅನೇಕ ಮಾಧ್ಯಮ ವೇದಿಕೆಗಳಲ್ಲಿ ಅವರು ಡಾಜ್‌ ಕಾಯಿನ್‌ ಅನ್ನು ಬೆಂಬಲಿಸಿದ್ದಾರೆ. ಈ ಬದಲಾವಣೆ ಘೋಷಿಸಿದ ಬೆನ್ನಲ್ಲೇ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಡಾಜ್‌ ಕಾಯಿನ್‌ ಮೌಲ್ಯವು ಏರಿಕೆಯಾಗಿದೆ.

ಈ ಕುರಿತು ಟ್ವೀಟ್‌ ಮೂಲಕವೇ ಎಲಾನ್‌ ಮಸ್ಕ್‌ ದೃಢೀಕರಿಸಿದ್ದು ಮೀಮ್‌ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಟ್ವಿಟ್ಟರ್‌ ಲೋಗೋ ಬದಲಾವಣೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!