ಮಂಗಳೂರಿನ ಕಡಲಾಳದಲ್ಲಿ ಎಷ್ಟಿವೆ ಮುಳುಗಡೆಯಾದ ಹಡಗುಗಳು?

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮತ್ತೊಂದು ಬೃಹತ್ ಹಡಗು ಮಂಗಳೂರಿನ ಕಡಲಿನಲ್ಲಿ ಮುಳುಗಡೆಯಾಗಿ ತಳ ಸೇರುತ್ತಿದೆ. ಕಡಲು ಮಾತ್ರ ಏನೂ ಆಗಿಲ್ಲವೇನೋ ಎಂಬಂತೆ ಮತ್ತೆ ಎಂದಿನಂತೆ ಶಾಂತವಾಗಿದೆ. ಬೃಹತ್ ಸರಕು ಹೊತ್ತು ಸಾಗುತ್ತಿದ್ದ ಎಂ.ವಿ. ಪ್ರಿನ್ಸಸ್ ಮಿರಾಲ್ ಹೆಸರು ಮಂಗಳೂರಿನಲ್ಲಿ ಕಡಲಪಾಲಾದ ಹಡುಗುಗಳ ಪಟ್ಟಿಗೆ ಸೇರಿಹೋಗಿದೆ.

2007ರಲ್ಲಿ ತಣ್ಣೀರುಬಾವಿಯಲ್ಲಿ ಎಂ.ವಿ.ಡೆಂಡೆನ್ ಹೆಸರಿನ ಶಿಪ್ ಮುಳುಗಡೆಯಾಗಿದ್ದು, ಅದನ್ನು ಇನ್ನೂ ಮೇಲೆತ್ತಲಾಗಿಲ್ಲ. ಇದರ ಬೆನ್ನು ಬೆನ್ನಿಗೆ ಹಲವು ಅವಘಡಗಳು ಸಂಭವಿಸಿವೆ. 2009ರಲ್ಲಿ ಏಶಿಯನ್ ಫಾರೆಸ್ಟ್ ಶಿಪ್ ನವ ಮಂಗಳೂರು ಬಂದರಿನಲ್ಲಿ ದುರಂತಕ್ಕೀಡಾಗಿತ್ತು. 14,500ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಸಾಗಿಸುತ್ತಿದ್ದ ಈ ಶಿಪ್ ಮುಳುಗಿ ಕೋಟ್ಯಂತರ ಪ್ರಮಾಣದಲ್ಲಿ ನಷ್ಟ ಉಂಟಾಗಿತ್ತು.
2017ರ ಜೂನ್ ೩ರಂದು ಉಳ್ಳಾಲದಲ್ಲಿ ಬಾರ್ಜ್ ಒಂದು ಮುಳುಗಡೆಯಾಗಿತ್ತು. ಈ ಸಂದರ್ಭ ಇದರಲ್ಲಿ ಸಿಲುಕಿದ್ದ 27 ಮಂದಿಯನ್ನು ಕೋಸ್ಟ್ ಗಾರ್ಡ್ ತಂಡ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ರಕ್ಷಿಸಿತ್ತು.

ಇದೀಗ 2022ರಲ್ಲಿ ಮತ್ತೊಂದು ಹಡಗು ದುರಂತಕ್ಕೀಡಾಗಿದೆ. ಬರೋಬ್ಬರಿ 8ಸಾವಿರ ಟನ್ ಸ್ಟೀಲ್ ಕಾಯಿಲ್‌ಗಳನ್ನು ಚೀನಾದಿಂದ ಲೆಬನಾನ್‌ಗೆ ಸಾಗಿಸುತ್ತಿದ್ದ ಈ ನೌಕೆ ಸಮುದ್ರ ಮಂಗಳೂರಿನ ಉಳ್ಳಾಲ ಬಳಿ ಅಪಾಯಕ್ಕೆ ಸಿಲುಕಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!