ಬೆಳಗ್ಗೆ ಕಾಫಿ, ತಿಂಡಿ ನಂತರ ಟೀ, ಊಟದ ನಂತರ ಮತ್ತೊಂದು ಕಾಫಿ, ಸಂಜೆ ಮತ್ತೆ ಟೀ ಹೀಗೆ ದಿನಕ್ಕೆ ಮೂರ್ನಾಲ್ಕು ಬಾರಿ ಕಾಫಿ ಟೀ, ಸಿಹಿತಿನಿಸು, ಸಕ್ಕರೆ ತಿಂಡಿ ತಿಂದ್ರೆ ಬೇಗನೇ ಆರೋಗ್ಯ ಕೆಡುತ್ತದೆ. ಯಾರು ದಿನಕ್ಕೆ ಎಷ್ಟು ಸಕ್ಕರೆ ತಿನ್ನಬೇಕು? ಇಲ್ಲಿದೆ ಡೀಟೇಲ್ಸ್..
ಮಹಿಳೆಯರು
ಇವರು ದಿನಕ್ಕೆ ಆರು ಸ್ಪೂನ್‌ನಷ್ಟು ಸಕ್ಕರೆ ತಿನ್ನಬಹುದಂತೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ಮಹಿಳೆ ದಿನಕ್ಕೆ 25ಗ್ರಾಂನಷ್ಟು ಸಕ್ಕರೆ ತಿನ್ನಬಹುದು. ಕಾಫಿ, ಟೀ, ಸ್ವೀಟ್ಸ್, ಕೇಕ್ಸ್ ಎಲ್ಲವನ್ನೂ ಸೇರಿ.
ಪುರುಷರು
ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ಪುರುಷರು ದಿನಕ್ಕೆ ಒಂಬತ್ತು ಸ್ಪೂನ್ ಸಕ್ಕರೆ ಸೇವನೆ ಮಾಡಬಹುದು. ಅಂದರೆ ಅಂದಾಜು 36ಗ್ರಾಂಗಳಷ್ಟಾಗಿದೆ.
ಮಕ್ಕಳು
2-15ವರ್ಷದವರೆಗಿನ ಮಕ್ಕಳು ಕೂಡ ದಿನಕ್ಕೆ 25ಗ್ರಾಂನಷ್ಟು ಸಕ್ಕರೆ ತಿನ್ನಬಹುದು.