ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಏಪ್ರಿಲ್ 29ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ಇನ್ನು ಇದೇ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯಾದ ವಿನಯ್ ಗೌಡಗೆ 500 ರೂಪಾಯಿ ದಂಡ ವಿಧಿಸಿ ವಾರಂಟ್ ರೀಕಾಲ್ ಮಾಡಲಾಗಿದೆ .
ಇತ್ತ ಜಾಮೀನು ಕೋರಿ ರಜತ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ರಜತ್ ಜಾಮೀನು ಅರ್ಜಿ ವಿಚಾರಣೆ ಕೋರ್ಟ್ ನಾಳೆ ನಿಗದಿಪಡಿಸಿದೆ.