ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟರ್ ಶುಭ್‌ಮನ್ ಗಿಲ್ ಹುಡುಗಿಯರ ವಿಚಾರಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಸಾರಾ ಅಲಿ ಖಾನ್ ಹಾಗೂ ಸಾರಾ ತೆಂಡೂಲ್ಕರ್ ಜತೆ ಶುಭ್‌ಮನ್ ಹೆಸರು ತಳುಕಿಹಾಕಿಕೊಂಡಿತ್ತು.
ಇದೀಗ ರಶ್ಮಿಕಾ ಮಂದಣ್ಣ ಮೇಲೆ ಶುಭ್‌ಮನ್‌ಗೆ ಕ್ರಶ್ ಆಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ರಶ್ಮಿಕಾ ಕೂಡ ಖುಷಿಯಾಗಿದ್ದರು. ಆದರೆ ಇದೀಗ ಶುಭ್‌ಮನ್ ಉಲ್ಟಾ ಹೊಡೆದಿದ್ದು, ರಶ್ಮಿಕಾ ನನ್ನ ಕ್ರಶ್ ಅಲ್ಲ ಎಂದಿದ್ದಾರೆ.
ಸಿಕ್ಕಾಪಟ್ಟೆ ಫೇಕ್ ರಿಪೋರ್ಟ್‌ಗಳಾಗಿವೆ ನಾನು ಎಲ್ಲಿಯೂ ರಶ್ಮಿಕಾ ನನ್ನ ಕ್ರಶ್ ಅಂತ ಹೇಳಿಲ್ಲ, ರಶ್ಮಿಕಾ ನನ್ನ ಕ್ರಶ್ ಈಗಲೂ ಅಲ್ಲ, ಮುಂದೆ ಆಗುವುದೂ ಇಲ್ಲ ಎಂದು ಗಿಲ್ ಹೇಳಿದ್ದಾರೆ. ವ್ಯಾಲೆಂಟೀನ್ಸ್ ಡೇ ದಿನ ಸಾರಾ ಜತೆ ರೆಸ್ಟೋರೆಂಟ್‌ನಲ್ಲಿದ್ದ ಗಿಲ್ ಫೋಟೊಸ್ ಎಲ್ಲೆಡೆ ವೈರಲ್ ಆಗಿದ್ದು, ಸಾರಾ ಜೊತೆ ಡೇಟಿಂಗ್ ವಿಷಯದ ಬಗ್ಗೆ ಗಿಲ್ ಮಾತನಾಡಿಲ್ಲ. ಈ ಸುದ್ದಿಯನ್ನು ಅಲ್ಲಗಳೆದಿಲ್ಲ. ಏನೋ ಒಟ್ಟಾರೆ ರಶ್ಮಿಕಾ ಫ್ಯಾನ್ಸ್‌ಗೆ ಬೇಜಾರಾಗಿರೋದಂತೂ ಗ್ಯಾರೆಂಟಿ!