Monday, August 8, 2022

Latest Posts

ವಿಶ್ವಾಸಮತ ಗೆದ್ದ ಏಕನಾಥ್ ಶಿಂಧೆ‌ ಪಡೆದ ಮತಗಳೆಷ್ಟು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಏಕನಾಥ್‌ ಶಿಂಧೆಯವರು ವಿಧಾನ ಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯನ್ನು ಗೆಲ್ಲುವ ಮೂಲಕ ತಮ್ಮ ಖುರ್ಚಿಯನ್ನು ಭದ್ರಪಡಿಸಿಕೊಂಡಿದ್ದಾರೆ.

ನೂತನ ಅಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಂದು ಎರಡನೇ ದಿನದ ವಿಧಾನಸಭೆ ಕಲಾಪ ನಡೆಯುತ್ತಿದ್ದು ನಿನ್ನೆ ರಾಹುಲ್‌ ಬಂಡಾಯ ಶಿವಸೇನೆ ಹಾಗೂ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ರಾಹುಲ್‌ ನಾರ್ವೇಕರ್‌ ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇಂದು ಶಿಂಧೆ ಸರ್ಕಾರವು ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಅಗ್ನಿ ಪರೀಕ್ಷೆಯನ್ನು ಎದುರಿಸಿದ್ದು ಇದರಲ್ಲಿ ಏಕನಾಥ್‌ ಶಿಂಧೆ ಪಾಸ್‌ ಆಗಿದ್ದಾರೆ. ಮುಖ್ಯಮಂತ್ರಿ ಏಕನಾಥ್‌ ಶಿಂಧೆಗೆ 164 ಶಾಸಕರು ಬೆಂಬಲ ನೀಡಿದ್ದು ಸದನದಲ್ಲಿ ಬಹುಮತ ಸಾಬೀತಾಗಿದೆ.

ಆಡಳಿತಾರೂಢ ಸರ್ಕಾರದ ವಿರುದ್ಧ 99 ಮತಗಳು ಚಲಾವಣೆಯಾಗಿದ್ದು ಎಸ್‌ಪಿಯ ಅಬು ಅಜ್ಮಿ ಮತ್ತು ರಯೀಸ್ ಶೇಖ್ ಮತ್ತು ಎಐಎಂಐಎಂ ಶಾಸಕ ಶಾ ತಾರಿಖ್ ಅನ್ವರ್ ಮತದಾನದಿಂದ ದೂರ ಉಳಿದಿದ್ದಾರೆ. ಇನ್ನು ಏಕನಾಥ್‌ ಶಿಂಧೆಯ ಮೇಲೆ ವಿಶ್ವಾಸವಿಟ್ಟು ಬೆಂಬಲಿಸಿದ್ದಕ್ಕೆ ಉಪಮುಖ್ಯಮಂತ್ರಿಯಾಗಿರುವ ಬಿಜೆಪಿಯ ದೇವೇಂದ್ರ ದೇವೇಂದ್ರ ಫಡ್ನವೀಸ್‌ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss