ಮರದಿಂದ ಮರಕ್ಕೆ ಹಾರಿ ಕೋತಿ ಮರಿ ಬೇಟೆಯಾಡಿದ ಚಿರತೆ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಡಗಿ ಕುಳಿತು ಬೇಟೆಯಾಡುವ ತಂತ್ರಗಾರಿಕೆ ಚಿರತೆಯದ್ದು, ನೆಲದ ಮೇಲೆ ಅತ್ಯಂತ ವೇಗವಾಗಿ ಓಡುವ ಚಿರತೆ ಮರದ ಮೇಲಿನ ಬೇಟೆಯಾಡುವಾಗ ಬಹಳ ಎಚ್ಚರಿಕೆಯಿಂದ ಇರುತ್ತದೆ. ಮರದಿಂದ ಮರಕ್ಕೆ ಜಿಗಿಯುತ್ತಿದ್ದ ಕೋತಿ ಮರಿ ಹಿಡಿಯಲು ಹೊಂಚು ಹಾಕಿ ಕುಳಿತು ಕೊನೆಗೂ ಬೇಟೆಯಾಡಿದೆ.

ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಇಲಾಖೆ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಪುಟ್ಟ ಕೋತಿ ಮರಿಯನ್ನು ಹಿಡಿದು ಚಿರತೆ ಕೆಳಗೆ ಜಾರಿರುವ ವಿಡಿಯೋದಲ್ಲಿನ ಚಿರತೆ ಚಾಣಾಕ್ಷತನಕ್ಕೆ ಕೆಲವರು ಮೆಚ್ಚುಗೆ ಸೂಚಿಸಿದ್ರೆ, ಇನ್ನೂ ಕೆಲವರು ಕೋತಿಮರಿ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!