ನಾವು ಕೇಳಿದ್ದೆಷ್ಟು ಅವ್ರು ಕೊಟ್ಟಿದ್ದೆಷ್ಟು? ಕೇಂದ್ರದಿಂದ ಮಲತಾಯಿ ಧೋರಣೆ: ಕೃಷ್ಣ ಭೈರೇಗೌಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾವು 18,000 ಕೋಟಿಗೆ ಮನವಿ ಸಲ್ಲಿಸಿದ್ದೆವು.18,000 ಕೋಟಿ ಎಲ್ಲಿ 3,400 ಕೋಟಿ ಎಲ್ಲಿ?  ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ಮಾಡಿದ್ದೇವೆ. ಆದರೆ ಯಾವುದೇ ಅಧಿಕೃತ ದೃಢೀಕರಣ ಆಗಿಲ್ಲ. ನಾವು ಅಧಿಕೃತ ಆದೇಶದ ನೀರಿಕ್ಷೇಯಲ್ಲಿದ್ದೇವೆ ಎಂದರು.

ಅವರ ಬಳಿ ಸಮಯ ಇದ್ದಾಗ ರಾಜ್ಯಕ್ಕೆ ಪರ ಪರಿಹಾರ ಬಿಡುಗಡೆ ಅವಕಾಶ ತೆಗೆದುಕೊಂಡಿಲ್ಲ. ನಾಲ್ಕು ತಿಂಗಳು ನಾವು ನೀಡಿದ ಪತ್ರದ ಮೇಲೆ ಕೂತಿದ್ದರು. ಕರ್ನಾಟಕದ ಹಕ್ಕಿಗೆ ಯಾವುದೇ ಬೆಲೆಯನ್ನೂ ಕೊಡಲಿಲ್ಲ. ಅವರ ಕೈಯಲ್ಲಿ ತೀರ್ಮಾನ ಇದ್ದಾಗ ರಾಜ್ಯಕ್ಕೆ ಕೊಡಬಾರದು ಅನ್ನೋ ಧೋರಣೆ ಹೊಂದಿದ್ದರು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!