ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ಐಡಿಯಲ್ ಕಪಲ್ ಯಶ್-ರಾಧಿಕಾ ಬಗ್ಗೆ ಒಂದೂ ನೆಗೆಟಿವ್ ಕಮೆಂಟ್ ಕಂಡಿಲ್ಲ. ಈ ಬಾರಿ ಯಶ್ ತಮ್ಮ ಇಂಟರ್‌ವ್ಯೂ ಒಂದರಲ್ಲಿ ರಾಧಿಕಾ ನನ್ನ ಶಕ್ತಿ ಎಂದು ಹೇಳಿಕೊಂಡಿದ್ದಾರೆ.
ರಾಧಿಕಾ ಸಿಕ್ಕಿದ್ದು ನನ್ನ ಅದೃಷ್ಟ. ಅವಳು ಯಾವಾಗಲೂ ನನ್ನ ಬೆಂಬಲಿಸಿದ್ದಾಳೆ. ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳೆ. ಇಬ್ಬರೂ ಒಟ್ಟಾಗಿ ಬೆಳೆದವರು. ನಾವಿಬ್ಬರೂ ಗೆಳೆಯರಾಗಿ ಪರಿಚಯ ಆದವರು. ನಂತರ ಮದುವೆ ಆದೆವು. ನಾನು ಏನು ಎಂಜಾಯ್ ಮಾಡುತ್ತೇನೆ ಅನ್ನೋದು ಫ್ರೆಂಡ್ ಆಗಿ ಅವಳಿಗೆ ಗೊತ್ತು. ಈ ಚಿತ್ರದಿಂದ ಏನು ಸಿಗುತ್ತದೆ? ಎಷ್ಟು ಹಣ ಸಿಗುತ್ತದೆ ಎಂದು ಯಾವಾಗಲೂ ಕೇಳಿಲ್ಲ. ಇದು ಒಳ್ಳೆಯ ಆಯ್ಕೆಯೇ ಅಥವಾ ಕೆಟ್ಟ ಆಯ್ಕೆಯೇ ಎಂದು ಕೇಳಿಲ್ಲ. ನೀನು ಖುಷಿಯಾಗಿದ್ದೀಯಾ ಎಂದಷ್ಟೇ ಕೇಳುತ್ತಾಳೆ. ಅವಳು ಅಟೆಷನ್ಷನ್ ಹಾಗೂ ಸಮಯವನ್ನು ಮಾತ್ರ ಕೇಳುತ್ತಾಳೆ’ ಎಂದಿದ್ದಾರೆ ಯಶ್.