ನ್ಯಾಷನಲ್‌ ಕ್ರಶ್‌ ನಟಿ ರಶ್ಮಿಕಾ ಮಂದಣ್ಣ ಪಡೆಯೋ ಸಂಭಾವನೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ಯಾಂಡಲ್‌ ವುಡ್‌ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್‌ ಕ್ರಶ್‌ ಆಗಿದ್ದಾರೆ. ನಟಿಸಿದ ಎಲ್ಲಾ ಚಿತ್ರಗಳು ಕೋಟಿ ಕೋಟಿ ಬಾಚಿಕೊಳ್ಳುವಂತೆ ಮಾಡಿದೆ.
ಗೀತ ಗೋವಿಂದಂ, ಸರಿಕೇರು ನೀಕೆವ್ವರು ನಂತರ ಇತ್ತೀಚಿನ ಪುಷ್ಪ ಕೂಡ ಬ್ಲಾಕ್‌ ಬಾಸ್ಟರ್‌ ಹಿಟ್‌ ಆಗುತ್ತಿದ್ದಂತೆ ನಟಿ ರಶ್ಮಿಕಾ ಅವರ ಸಂಭಾವನೆ ಕೂಡ ಎಚ್ಚಾಗುತ್ತಿದೆ.
ಪುಷ್ಪ ಚಿತ್ರದ ವರೆಗೂ 2 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ನಟಿ ರಶ್ಮಿಕಾ ಈಗ 3 ಕೋಟಿ ರೂ. ಗೆ ಏರಿಸಿದ್ದಾರಂತೆ. ಪುಷ್ಪ-1 ಚಿತ್ರಕ್ಕೆ 2 ಕೋಟಿ ರೂ. ಪಡೆದ ರಶ್ಮಿಕಾ ಈಗ ಪುಷ್ಪದ ಮತ್ತೊಂದು ಭಾಗಕ್ಕೆ 3 ಕೋಟಿ ರೂ. ಬೇಡಿಕೆ ಇಟ್ಟಿದ್ದಾರಂತೆ. ಇದಕ್ಕೆ ನಿರ್ಮಾಪಕರು ಸಮ್ಮತಿಸಿದ್ದಾರೆ ಎನ್ನಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!