ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೊಮ್ಮೆ ಹೋಗುವ ಜಾಗಕ್ಕಿಂತ ಹೋಗುವ ದಾರಿ ಸುಂದರ ಅಂತಾರೆ.
ಅದಕ್ಕೆ ಹೇಳಿ ಮಾಡಿಸಿದಂತಿದೆ ತಮಿಳುನಾಡಿನ ನಾಮಕ್ಕಲ್‌ನ ಕೊಲ್ಲಿ ಹಿಲ್ಸ್ ರಸ್ತೆ!
ಸುತ್ತಲೂ ಹಸಿರು ಹೊದಿಕೆ, ಕಣ್ಣರಳಿಸಿದಷ್ಟು ದೂರ ಬರೀ ಹಸಿರು. ಈ ರಸ್ತೆ ಫೋಟೊವನ್ನು ಮಾಜಿ ರಾಜಕಾರಣಿ ಎರಿಕ್ ಸೋಲ್ಹೈಮ್ ಹಂಚಿಕೊಂಡಿದ್ದು, ಆನಂದ್ ಮಹೀಂದ್ರಾ ಇದನ್ನು ರೀಟ್ವೀಟ್ ಮಾಡಿದ್ದಾರೆ.
ಸೋಲ್ಹೈಮ್ ಫೋಟೊ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ, ಭಾರತ, ಅತ್ಯಂತ ಭಯಾನಕ ಹಾಗೂ ಅದ್ಭುತವಾದ 7೦ ತಿರುವುಗಳನ್ನು ಹೊಂದಿರೋ ತಮಿಳುನಾಡಿನ ರಸ್ತೆ ನೋಟ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಆನಂದ್ ಮಹೀಂದ್ರ ರೀಟ್ವೀಟ್ ಮಾಡಿದ್ದು, ನಿಮ್ಮ ಟ್ವೀಟ್ ನೋಡಿದ ಮೇಲೆ ನನ್ನ ದೇಶದ ಬಗ್ಗೆ ನಾನೆಷ್ಟು ಕಮ್ಮಿ ತಿಳ್ಕೊಂಡಿದ್ದೀನಿ ಎನಿಸುತ್ತಿದೆ. ಇದು ಅದ್ಭುತವಾಗಿದೆ. ಈ ರಸ್ತೆ ಯಾರು ಮಾಡಿದ್ದು ತಿಳ್ಕೋತಿನಿ ನಂತರ ನನ್ನ ಥಾರ್ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ. ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Erik you keep showing me how little I know about my own country! This is just phenomenal. I want to find out who built this road and then I will only trust my Thar to take me on it! https://t.co/eD1IFsgcn6
— anand mahindra (@anandmahindra) January 9, 2022