October 8, 2026
Thursday, October 8, 2026
spot_img

ಅಂದುಕೊಂಡದ್ದು ನಡೆದ ನಂತರ ಹರಕೆ ತೀರಿಸಲು ಎಷ್ಟು ಸಮಯ ಇರುತ್ತದೆ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?

ಪ್ರತೀ ಮನುಷ್ಯರಿಗೂ ಜೀವನ ಮುಂದೂಡಲು ಯಾವುದಾದರೂ ಒಂದು ನಂಬಿಕೆ ಬೇಕೇಬೇಕು. ಕೆಲವರು ದೇವರನ್ನು ನಂಬಿ ಮುನ್ನಡೆಯುತ್ತಾರೆ, ಕೆಲವರು ಸೇವೆಗಳನ್ನು ನಂಬಿ ಮುನ್ನಡೆಯುತ್ತಾರೆ. ಅಂದುಕೊಂಡದ್ದನ್ನು ಮಾಡಿಕೊಡಿ ಎಂದು ನಿತ್ಯವೂ ದೇವರ ಮುಂದೆ ಕೈ ಮುಗಿಯುತ್ತೇವೆ. ಹಾಗೆಯೇ ದೊಡ್ಡ ದೊಡ್ಡ ವಿಚಾರಗಳನ್ನು ತಮ್ಮಿಷ್ಟದಂತೆ ಮಾಡಿಕೊಡಲು ಹರಕೆಗಳನ್ನು ಕಟ್ಟಿಕೊಳ್ಳುತ್ತೇವೆ. ಮನೆ ಕಟ್ಟುವುದು, ವಿದ್ಯಾಭ್ಯಾಸದಲ್ಲಿ ಮೊದಲ ಸ್ಥಾನ ತಲುಪುವುದು, ಕೆಲಸ, ಮದುವೆ, ಮಕ್ಕಳು ಹೀಗೆ ಪ್ರತಿಯೊಂದು ದೊಡ್ಡ ಹೆಜ್ಜೆಗಳಲ್ಲಿ ಯಾವುದೇ ಸಮಸ್ಯೆ ಬಾರದಂತೆ ಎಲ್ಲವೂ ಸುರಾಗವಾಗಿ ನಡೆಯಲಿ ಎಂದು ಜನ ಬೇಡಿಕೊಳ್ಳುತ್ತಾರೆ. ನನ್ನ ಆಸೆ ಈಡೇರಿದರೆ ದೇವಸ್ಥಾನಕ್ಕೆ ಬರುತ್ತೇನೆ, ಕಾಣಿಕೆ ಹಾಕುತ್ತೇನೆ, ಪೂಜೆ ಮಾಡಿಸುತ್ತೇನೆ, ಗಂಟೆ ಕಟ್ಟುತ್ತೇನೆ, ಮಾಂಸಾಹಾರ ತ್ಯಜಿಸುತ್ತೇನೆ, ಇಷ್ಟಪಟ್ಟ ಊಟ ಬಿಟ್ಟುಬಿಡುತ್ತೇನೆ ಎಂದೆಲ್ಲಾ ಜನ ಬೇಡಿಕೊಳ್ಳುತ್ತಾರೆ. ಕೆಲಸ ಆದ ನಂತರ ಯಾವಾಗ ಹರಕೆ ತೀರಿಸಬೇಕು? ಇಲ್ಲಿದೆ ಮಾಹಿತಿ..

ನೀವು ಅಂದುಕೊಂಡ ಕೆಲಸ ಆದ ನಂತರ ಆದಷ್ಟು ಬೇಗ ಹರಕೆಯನ್ನು ತೀರಿಸಿಕೊಳ್ಳಬೇಕು. ದೇವರಿಗೆ ಹೇಳಿಕೊಳ್ಳುವಾಗ ನಾನು ಮೂರು ತಿಂಗಳಲ್ಲಿ ಹರಕೆ ತೀರಿಸುತ್ತೇನೆ, ನಾಲ್ಕು ದಿನಗಳಲ್ಲಿ ಹರಕೆ ತೀರಿಸುತ್ತೇನೆ ಎಂದು ಬಾಯಲ್ಲಿ ಹೇಳಿಕೊಂಡಿದ್ದರೆ ಅದನ್ನು ಆ ಸಮಯದೊಳಗೆ ಮಾಡಬೇಕು. ಇಲ್ಲವಾದಲ್ಲಿ ಆದಷ್ಟು ಬೇಗ ಹೋಗಿ ಬರುವುದು ಸೂಕ್ತವಾಗಿದೆ.

ಅನಾರೋಗ್ಯ ಅಥವಾ ಉದ್ಯೋಗ ಫಲ ಸಿಕ್ಕ ನಂತರ ಆದಷ್ಟು ಬೇಗ ಹರಕೆ ತೀರಿಸಬೇಕು. ಮಗು ಆಗಬೇಕು ಎಂದು ಬೇಡಿಕೊಂಡಿರುತ್ತೀರಿ ಅಥವಾ ಮಗು ಆರೋಗ್ಯವಾಗಿ ಜನಿಸಲಿ ಎಂದು ಬೇಡಿಕೊಂಡಿರುತ್ತೀರಿ. ಇಂತಹ ಸಂದರ್ಭದಲ್ಲಿ ಮಗು ಹುಟ್ಟಿದ ತಕ್ಷಣವೇ ಹೋಗೋದು ಅಸಾಧ್ಯ. ಆಗ ಮಗು ಟ್ರಾವೆಲ್‌ ಮಾಡುವಂತಾದ ನಂತರ ಹೋಗಿ ಬಂದುಬಿಡಬೇಕು.

ಯಾವ ದೇವರಿಗೆ ಹರಕೆ ಹೊತ್ತಿದ್ದೀರಿ ಆ ದೇವರಿಗೆ ಅಂತಹ ದಿನವೇ ಹರಕೆ ತೀರಿಸಿ. ಉದಾಹರಣೆಗೆ ರಾಯರಿಗೆ ಗುರುವಾರ, ವೆಂಕಟೇಶ್ವರನಿಗೆ ಶನಿವಾರ, ಈಶ್ವರನಿಗೆ ಸೋಮವಾರ, ದೇವಿಗೆ ಶುಕ್ರವಾರದಂತೆ ಹರಕೆ ತೀರಿಸಿ.

ಇನ್ನು ದೇವರಿಂದ ನೀವೊಂದನ್ನು ಬಯಸುತ್ತೀರಿ, ದೇವರು ನಿಮ್ಮ ಆಸೆಯನ್ನು ಅರಿತು ಫಲ ನೀಡುತ್ತಾನೆ. ಅದಕ್ಕೆ ಪ್ರತಿಯಾಗಿ ಆತನ ಸೇವೆಗೆ ನೀವು ಅಣಿಯಾಗುತ್ತೀರಿ. ಆದರೆ ಈ ಪ್ರಕ್ರಿಯೆ ಬೇಕಂತಲೇ ವಿಳಂಬ ಮಾಡಿದರೆ ಅಥವಾ ಕೆಲಸ ಆಗಿದೆಯಲ್ಲಾ ಎಂದು ನಿರ್ಲಕ್ಷ್ಯ ಮಾಡಿದರೆ ಇದು ವಾಕ್‌ ದೋಷ ಎಂದು ಪರಿಗಣಿಸಲಾಗುತ್ತದೆ. ದೇವರಿಗೆ ಕೊಟ್ಟ ಮಾತನ್ನು ನೀವು ತಪ್ಪಿದ ದೋಷಕ್ಕೆ ಒಳಗಾಗುತ್ತೀರಿ. ನಿಮ್ಮ ಫಲಗಳು ನಾಶವಾಗಬಹುದು ಅಥವಾ ಬೇರೆ ಯಾವುದಾದರೂ ಸಮಸ್ಯೆಗಳು ಬರಬಹುದು.

ಒಂದು ವೇಳೆ ಆರೋಗ್ಯ ಅಥವಾ ಇನ್ನಿತರ ಅನಿವಾರ್ಯ ಕಾರಣಗಳಿಂದ ಹರಕೆ ತೀರಿಸುವುದು ತಡವಾದರೆ ದೇವರ ಕೋಣೆಯಲ್ಲಿಯೇ ಒಂದು ಹಳದಿ ಅಥವಾ ಕೆಂಪು ಬಟ್ಟೆಯಲ್ಲಿ ಮುಡಿಪು ಕಟ್ಟಿ ಇಡಿ. ಇಂತಿಷ್ಟೇ ದಿನದಲ್ಲಿ ಹರಕೆ ತೀರಿಸುತ್ತೀನಿ ಎಂದು ಹೇಳಿಕೊಳ್ಳಿ.

Must Read