ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡುವ ವಿಚಾರ ಕುರಿತು ಪರಿಶೀಲನೆ ಮಾಡುತ್ತಿದ್ದೇವೆ. ಕ್ಷುಲ್ಲಕ ವಿಷಯಕ್ಕೂ ರಿಪೋರ್ಟ್ ಕೇಳಿದರೆ ಹೇಗೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.
ದೂರು ಕೊಡುವ ಬಗ್ಗೆ ನಾವು ಪರಿಶೀಲನೆ ಮಾಡುತ್ತಿದ್ದೇವೆ. ರಾಜ್ಯಪಾಲರು ಸಣ್ಣ ಸಣ್ಣ ವಿಚಾರಕ್ಕೆ ಹೀಗೆ ಮಾಡುತ್ತಿದ್ದಾರೆ. ಯಾರೋ ಒಬ್ಬ ಸಣ್ಣ ದೂರು ಕೊಟ್ಟಿದ್ದಾನೆ. ಮೈಸೂರಿನವನು ದೂರು ಕೊಟ್ಟಿದ್ದಾನೆ. ಸಿದ್ದರಾಮಯ್ಯ ಯಾವಾಗಲೂ ಕನ್ನಡದಲ್ಲಿ ಸಹಿ ಹಾಕುತ್ತಾರೆ. ಆದರೆ ಇಂಗ್ಲಿಷ್‌ನಲ್ಲಿ ಸಹಿ ಮಾಡಿದ್ದಾರೆ. ಅದಕ್ಕೆ ತನಿಖೆ ಮಾಡಿ ಅಂತ ದೂರು ಕೊಟ್ಟಿದ್ದಾನೆ. ಇದು ವಿಷಯನಾ? ಅದು ವಿಷಯನಾ? ಎಂದು ರಾಜ್ಯಪಾಲರನ್ನು ಪ್ರಶ್ನಿಸಿದರು.
ಸಹಿ ಕನ್ನಡದಲ್ಲಿ ಆದರು ಮಾಡಬಹುದು, ಇಂಗ್ಲಿಷ್‌ನಲ್ಲಿ ಬೇಕಾದರೂ ಮಾಡಬಹುದು. ಯಾವ ಭಾಷೆ ಬರುತ್ತೋ ಆ ಭಾಷೆಯಲ್ಲಿ ಸಹಿ ಮಾಡಬಹುದು. ನಾನು ಸಾಮಾನ್ಯವಾಗಿ ಕನ್ನಡದಲ್ಲಿ ಇರೋ ಡ್ರಾಫ್ಟ್ಗಳಿಗೆ ಕನ್ನಡದಲ್ಲಿ ಸಹಿ ಮಾಡುತ್ತೇನೆ. ಇಂಗ್ಲಿಷ್‌ನಲ್ಲಿ ಡ್ರಾಫ್ಟ್ ಇದ್ದರೆ, ಬೇರೆ ರಾಜ್ಯಗಳಿಗೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವಾಗ ಇಂಗ್ಲಿಷ್‌ನಲ್ಲಿ ಸಹಿ ಮಾಡುತ್ತೇನೆ. ಅದರಲ್ಲಿ ತಪ್ಪೇನು? ಇಂತಹ ಕ್ಷುಲ್ಲಕ ವಿಚಾರಕ್ಕೆ ರಿಪೋರ್ಟ್ ಕೇಳಿದರೆ ಹೇಗೆ ಎಂದರು.