ಹೇಗಿರಬೇಕು ಯುಗಾದಿ ಹಬ್ಬದ ಆಚರಣೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಯುಗಾದಿ ಅಂದ್ರೆ ನೆನಪಾಗುವುದೇ ಬೇವು ಬೆಲ್ಲ. ಈ ಹಬ್ಬದ ಸಂಕೇತವೇ ಬೇವು ಬೆಲ್ಲವನ್ನು ಎಲ್ಲರೊಂದಿಗೆ ಹಂಚಿ ತಾವೂ ಸೇವಿಸುವುದು. ಈ ಹಬ್ಬವು ವರ್ಷದ ಆರಂಭ ಎಂದೇ ಸೂಚಿಸುತ್ತದೆ. ಹಾಗಾಗಿ ವರ್ಷದ ಮೊದಲ ಹಬ್ಬವನ್ನು ಯಾವ ರೀತಿ ಆಚರಿಸಿದರೆ ಒಳಿತು ಎಂಬುದಕ್ಕೆ ಸಲಹೆಗಳನ್ನು ಇಲ್ಲಿ ನೀಡಲಾಗಿದೆ ಓದಿ ತಿಳಿಯಿರಿ.

* ಈ ವಿಶೇಷ ದಿನದಂದು ಸೂರ್ಯೋದಯಕ್ಕೂ ಮುನ್ನ ಸಾಂಪ್ರದಾಯಿಕವಾಗಿ ಎಣ್ಣೆ ಸ್ನಾನ ಮಾಡಿ ನಂತರ ಹೊಸ ಬಟ್ಟೆ ಧರಿಸಬೇಕು.

* ಈ ದಿನದಂದು ಇಡೀ ಮನೆಯನ್ನು ಅಲಂಕರಿಸಿ, ವಿಶೇಷವಾಗಿ ಪೂಜಾ ಕೊಠಡಿಯನ್ನು ಸ್ವಚ್ಚಗೊಳಿಸಿ.

* ದೇವರ ವಿಗ್ರಹಗಳನ್ನು ಸ್ವಚ್ಚಗೊಳಿಸಿಕೊಂಡು ಅಲಂಕಾರ ಮಾಡಿ.

* ಮನೆಯ ಆವರಣವನ್ನು ರಂಗೋಲಿಯಿಂದ ಸಿಂಗರಿಸಿ.

* ಮನೆಯ ತುಂಬೆಲ್ಲಾ ಮಾವಿನ ಎಲೆ, ಬೇವಿನ ಎಲೆ ಮತ್ತು ತಳಿರು ತೋರಣಗಳಿಂದ ಅಲಂಕಾರ ಮಾಡಿ.

* ಇಂದು ದೇವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ.

* ಸಿಹಿ ಖಾದ್ಯಗಳನ್ನು ತಯಾರಿಸಿ, ಕುಟುಂಬ ಸದಸ್ಯರೊಂದಿಗೆ ಸವಿಯಿರಿ.

* ಹಬ್ಬದಂದು ಸಂಜೆ ಕುಟುಂಬದ ಸದಸ್ಯರೊಂದಿಗೆ ಬೇವು ಬೆಲ್ಲ ಸೇವಿಸುವ ಮೊದಲು ಸೂರ್ಯ ದೇವರ ಪ್ರಾರ್ಥನೆ ಮಾಡಿ.

* ಬಳಿಕ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶಿರ್ವಾದ ಪಡೆದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!