ಚೈತ್ರ ಮಾಸದ ಮೊದಲ ಹಬ್ಬ ʻಯುಗಾದಿʼ ಇತಿಹಾಸ, ವಿಶಿಷ್ಟತೆ ಏನು? ಏಕೆ ಆಚರಿಸುತ್ತೇವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಂದೂಗಳು ಆಚರಿಸುವ ವರ್ಷದ ಮೊದಲ ಹಬ್ಬ ಯುಗಾದಿ. ಹಿಂದೂಗಳಿಗೆ ಹಬ್ಬಗಳು ಯುಗಾದಿಯಿಂದಲೇ ಆರಂಭವಾಗುವುದು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕೇರಳದಲ್ಲಿ ಯುಗಾದಿ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಹಿಂದೂಗಳಿಗೆ ಹೊಸ ವರ್ಷ ಈ ಯುಗಾದಿ

ಸಾಮಾನ್ಯವಾಗಿ ಪಾಶ್ಚಿಮಾತ್ಯರಿಗೆ, ಕ್ರಿಶ್ಚಿಯನ್‌ ಸಮುದಾಯಕ್ಕೆ ಜನವರಿ ಒಂದು ಹೊಸ ವರ್ಷಾಚರಣೆಯಾದರೆ. ಹಿಂದೂಗಳಿಗೆ ಮಾತ್ರ ಯುಗಾದಿಯೇ ಹೊಸ ವರ್ಷ. ಈ ವಸಂತೋತ್ಸವಕ್ಕೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಭಾರತೀಯ ಸಂಪ್ರದಾಯದ ಪ್ರಕಾರ ಚೈತ್ರ ಶುಕ್ಲ ಪಾಡ್ಯಮಿಯ ಮೊದಲ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.

ಹಬ್ಬದ ಇತಿಹಾಸ

ಪುರಾಣಗಳ ಪ್ರಕಾರ ಬ್ರಹ್ಮ ಇಂದು ಸೃಷ್ಟಿಯನ್ನು ಸೃಷ್ಟಿಸಿದನೆಂದು ಬಲವಾಗಿ ನಂಬಲಾಗಿದೆ. ಪ್ರಭಾವ ನಾಮ ಯುಗಾದಿಯೊಂದಿಗೆ ಬ್ರಹ್ಮಕಲ್ಪ ಪ್ರಾರಂಭವಾಯಿತೆಂದು ಹೇಳಲಾಗುತ್ತದೆ ಅಂದಿನಿಂದ ಇಂದಿನವರೆಗೂ ಇದೇ ಆಚರಣೆ ಮುಂದುವರಿಯುತ್ತಿದೆ. ಇಲ್ಲಿಯವರೆಗೆ ಆರು ಬ್ರಾಹ್ಮಣರು ಬ್ರಹ್ಮ ಕಲ್ಪವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ, ಏಳನೇ ಬ್ರಹ್ಮ ಕಲ್ಪವನ್ನು ಮುಂದುವರೆಸಲಾಗುತ್ತಿದೆ. ಮೀನಿನ ರೂಪವನ್ನು ಧರಿಸಿದ ಭಗವಾನ್ ವಿಷ್ಣುವು ಸೋಮನನ್ನು ಕೊಂದು ವೇದಗಳನ್ನು ಉಳಿಸಿ ಬ್ರಹ್ಮನಿಗೆ ಒಪ್ಪಿಸಿದ ದಿನ ಎಂದೂ ಹೇಳಲಾಗುತ್ತದೆ.

ಕರ್ನಾಟಕ/ತೆಲುಗು ರಾಜ್ಯಗಳಲ್ಲಿ ಯುಗಾದಿ/ಉಗಾದಿ ಅಂತ ಕರೆದರೆ, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ, ಕೇರಳದಲ್ಲಿ ವಿಷು, ತಮಿಳುನಾಡಿನಲ್ಲಿ ಪುಟ್ಟಾಂಡು, ಸಿಖ್ಖರು ವೈಶಾಖಿ ಮತ್ತು ಬಂಗಾಳಿಗಳು ಪೊಯ್ ಲಾ ಬೈಸಾಖ್ ಎಂದು ಆಚರಿಸುತ್ತಾರೆ. ಯುಗಾದಿ ಅರ್ಥ ಯುಗ ಎಂದರೆ ಅವಧಿ, ಆದಿ-ಪ್ರಾರಂಭ ಎಂದರ್ಥ.

ವಿಶೇಷತೆ

ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ಬಳಿಕ ಚಳಿಗಾಲ ಕಳೆದು ವಸಂತ ಋತು ಆರಂಭವಾಗುತ್ತದೆ. ಪ್ರಕೃತಿ ಮಾತೆ ನಸುನಕ್ಕು ಹಸಿರ ಸೀರೆಯನ್ನುಡುವ ಕಾಲವಿದು. ಜನ ಈ ಹಬ್ಬಕ್ಕಾಗಿ ಮುಂದಿನಿಂದಲೇ ತಯಾರಿ ಮಾಡಿ, ಮನೆಯಂಗಳ ಸ್ವಚ್ಛಗೊಳಿಸಿ , ತಳಿರು-ತೋರಣಗಳಿಂದ ಅಲಂಕಾರ ಮಾಡುತ್ತಾರೆ. ಬೇವು-ಬೆಲ್ಲ ತಿನ್ನುವುದರ ಮೂಲಕ ಜೀವನದಲ್ಲಿ ಸಿಹಿಯಿರಲಿ ಕಹಿಯಿರಲಿ ಎರಡನ್ನೂ ಸಮಾನಾವಾಗಿ ಸ್ವೀಕರಿಸುವ ಸಂದೇಶವನ್ನು ಸಾರುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!