ಬಿಕ್ಕಳಿಕೆ ಬೇಗ ಹೋಗಿಸಬೇಕು ಎನ್ನುವುದೇನಿಲ್ಲ, ಕೆಲವರಿಗೆ ಗಂಟೆಗಟ್ಟಲೆ ಬಿಕ್ಕಳಿಕೆ ಬರುತ್ತದೆ. ಇದು ಕೆಲವೊಮ್ಮೆ ಮುಜುಗರ ಉಂಟು ಮಾಡುತ್ತದೆ. ಯಾವುದಾದರೂ ಮುಖ್ಯ ಕೆಲಸದ ಮೇಲಿದ್ದಾಗ ಹೆಚ್ಚು ಬಿಕ್ಕಳಿಕೆ ಬಂದು, ಅದನ್ನು ಕಡಿಮೆ ಮಾಡಬೇಕು ಎಂದರೆ ಹೀಗೆ ಮಾಡಿ..
- ಪೇಪರ್ ಬ್ಯಾಗ್‌ನಲ್ಲಿ ಸ್ವಲ್ಪ ಸಮಯ ಉಸಿರಾಡಿ
- ನಮಸ್ಕಾರ ಮಾಡುವ ರೀತಿ ಮಂಡಿಯನ್ನು ಎದೆಗೆ ತಾಗಿಸಿ ಬಗ್ಗಿ
- ಐಸ್ ಕೋಲ್ಡ್ ನೀರು ಕುಡಿಯಿರಿ
- ಸಕ್ಕರೆ ಪುಡಿ ತಿನ್ನಿ
- ನಿಂಬೆಹಣ್ಣು ತಿನ್ನಿ ಅಥವಾ ಒಂದು ಸಿಪ್ ವಿನೇಗರ್ ಸೇವಿಸಿ
- ಒಂದೆರೆಡು ಸೆಕೆಂಡ್ ಉಸಿರಾಡದಂತೆ ಮೂಗು ಮುಚ್ಚಿ
- ನಾಲಗೆ ಹೊರಹಾಕಿ ಉಸಿರಾಡಿ
- ಐಸ್ ನೀರಿನಿಂದ ಗಾರ್ಗಲ್ ಮಾಡಿ
- ಒಂದು ಸ್ಪೂನ್ ಜೇನುತುಪ್ಪ ಅಥವಾ ಪೀನಟ್ ಬಟರ್ ತಿನ್ನಿ
ಬಿಕ್ಕಳಿಕೆ ಬರೋದ್ಯಾಕೆ
- ವೇಗವಾಗಿ ಆಹಾರ ಸೇವನೆ ಮಾಡುವುದು
- ಕಾರ್ಬೋನೇಟೆಡ್ ಡ್ರಿಂಕ್‌ಗಳ ಸೇವನೆ
- ಖಾರವಾದ ಆಹಾರ
- ಒತ್ತಡ
- ಮದ್ಯಪಾನ