ಟಿ 20 ವಿಶ್ವಕಪ್‌: ಟೀಂ ಇಂಡಿಯಾ‌ ಸೇರಿದ ವೇಗಿ ಮೊಹಮದ್ ಸಿರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟಿ20 ವಿಶ್ವಕಪ್​ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸಿಸ್‌ ತಂಡವನ್ನು ರೋಚಕವಾಗಿ ಬಗ್ಗುಬಡಿದು ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ ಇಂದು ಬ್ರಿಸ್ಬೇನ್​ನಲ್ಲಿ ನಡೆಯಲಿರುವ ತನ್ನ 2ನೇ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 23 ರಂದು ಪಾಕ್‌ ತಂಡವನ್ನು ಎದುರಿಸುವುದಕ್ಕಿಂತ ಮುನ್ನ ಭಾರತಕ್ಕೆ ಇದು ಅಂತಿಮ ಅಭ್ಯಾಸವಾಗಲಿದೆ. ಈ ಪಂದ್ಯಕ್ಕೂ ಮುಂಚಿತವಾಗಿ ವೇಗಿ‌ ಮೊಹಮದ್ ಸಿರಾಜ್ ಭಾರತ ತಂಡವನ್ನು ಸೇರಿದ್ದಾರೆ.
ಜಸ್ಪ್ರೀತ್ ಬುಮ್ರಾ ವಿಶ್ವಕಪ್‌ ನಿಂದ ಔಟ್ ಆದ ಬಳಿಕ ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ಮೊಹಮದ್‌ ಶಮಿಯನ್ನು ಬುಮ್ರಾ ಬದಲಿಯಾಗಿ ಮುಖ್ಯ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದ್ದರಿಂದ ಶಮಿ ಸ್ಥಾನದಲ್ಲಿ ಸಿರಾಜ್ ಅವರು ಸ್ಟ್ಯಾಂಡ್-ಬೈ ಆಟಗಾರನಾಗಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ಣೋಯ್ ಮೀಸಲು ಆಟಗಾರರ ಪಟ್ಟಿಯಲ್ಲಿರುವ ಇನ್ನಿತರೆ ಆಟಗಾರರು.
ಟೀಂ ಇಂಡಿಯಾ ತನ್ನ T20 ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಪ್ರಾರಂಭಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!