September 12, 2026
Saturday, September 12, 2026
spot_img

LIFE | ಬೇರೆಯವರ ಮಾತನ್ನು ಕೇಳಿಯೂ ತಲೆ ಕೆಡಿಸಿಕೊಳ್ಳದೇ ಇರೋದು ಹೇಗೆ?

ಬೇರೆಯವರು ಏನು ಹೇಳ್ತಾರೆ? ಸಮಾಜ ಹೇಗೆ ನೋಡ್ತದೆ? ನಾನು ಸರಿ ಇದ್ದೀನಾ? ಹೀಗೆ ನೂರಾರು ಪ್ರಶ್ನೆಗಳತ್ತ ಮನಸ್ಸು ಹರಿದಾಡುತ್ತಿರುತ್ತದೆ. ಬೇರೆಯವರ ಮಾತಿಗೆ ಮನಸ್ಸು ನೋಯುತ್ತದೆ. ಅವರ ಮಾತನ್ನು ತಲೆಗೆ ಹಚ್ಚಿಕೊಂಡು ಇಡೀ ದಿನ ಕೊರಗುತ್ತಲೇ ಇರುತ್ತಾರೆ. ಆದರೆ ಬೇರೆಯವರ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳದೇ ಇರೋದು ಹೇಗೆ?

ಮಾತಾಡ್ಲಿ ಬಿಟ್ಬಿಡಿ. ಮಾತಾಡೋರ ಬಾಯಿ ನೋಯಬೇಕಷ್ಟೆ. ಏನೇ ಮಾತಾಡಿದ್ರೂ ಅವರಿಗೆ ನೀವು ನಿಮ್ಮನ್ನು ಪ್ರೂವ್‌ ಮಾಡಬೇಕಿಲ್ಲ. ಬೇರೆಯವರ ಆಲೋಚನೆಗಳನ್ನು ನೀವು ಕಂಟ್ರೋಲ್‌ ಮಾಡಬೇಕಿಲ್ಲ.

ಕೆಲವು ಜನರಿಗೆ ನೀವು ಇಷ್ಟ ಇಲ್ಲ ಅನ್ನೋದನ್ನು ಮನಸಾರೆ ಒಪ್ಪಿಕೊಳ್ಳಿ. ನಿಮ್ಮನ್ನು ಇಷ್ಟಪಡದವರು ನಿಮ್ಮಲ್ಲಿ ಕೆಟ್ಟದ್ದನ್ನೇ ಹುಡುಕುತ್ತಾರೆ. ಅಂತವರಿಗಾಗಿ ಬೇಸರ ಯಾಕೆ?

ನಿಮ್ಮ ಬಗ್ಗೆ ಮಾತಾಡೋ ಜನ ಮಾತಾಡಿ ಸುಮ್ಮನಾಗುತ್ತಾರೆ. ನೀವು ಅವರ ಬಗ್ಗೆ ಯೋಚಿಸುತ್ತಾ ದಿನ ಕಳೆಯುತ್ತೀರಿ. ಆದರೆ ಅವರು ಮಾತ್ರ ನಿಮ್ಮ ಬಗ್ಗೆ ಯೋಚಿಸೋದಿಲ್ಲ. ಇದನ್ನು ನೀವು ಆಲೋಚಿಸಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !