May 20, 2026
Wednesday, May 20, 2026
spot_img

ASTRO | ಹುಟ್ಟಿದ ಸಮಯ ಗೊತ್ತಿಲ್ವಾ? ಚಿಂತೆ ಬೇಡ, ಭವಿಷ್ಯ ತಿಳಿಯಲು ಇಲ್ಲಿದೆ ಅದ್ಭುತ ಮಾರ್ಗಗಳು!

ಅನೇಕ ಬಾರಿ ಜನ್ಮ ಕುಂಡಲಿ ಅಥವಾ ನಿಖರ ಭವಿಷ್ಯವನ್ನು ತಿಳಿದುಕೊಳ್ಳಲು ನಮಗೆ ಹುಟ್ಟಿದ ದಿನಾಂಕ ಮತ್ತು ಸಮಯದ ಅಗತ್ಯವಿರುತ್ತದೆ. ಆದರೆ, ಹಲವರಿಗೆ ತಮ್ಮ ನಿಖರವಾದ ಹುಟ್ಟಿದ ಸಮಯ ತಿಳಿದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಭವಿಷ್ಯವನ್ನು ತಿಳಿಯಲು ಸಾಧ್ಯವೇ ಇಲ್ಲ ಎಂದು ನಿರಾಶರಾಗಬೇಕಾಗಿಲ್ಲ. ಭಾರತೀಯ ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ಸಮಯ ಇಲ್ಲದೆಯೂ ವ್ಯಕ್ತಿಯ ಜೀವನದ ಏಳುಬೀಳುಗಳನ್ನು ನಿಖರವಾಗಿ ಲೆಕ್ಕಹಾಕಲು ಪ್ರಶ್ನ ಕುಂಡಲಿ, ಹಸ್ತಸಾಮುದ್ರಿಕಾ ಮತ್ತು ಬರ್ತ್ ಟೈಮ್ ರೆಕ್ಟಿಫಿಕೇಶನ್‌ನಂತಹ ಅದ್ಭುತ ಪರ್ಯಾಯ ಮಾರ್ಗಗಳಿವೆ. ಹುಟ್ಟಿದ ಸಮಯ ಗೊತ್ತಿಲ್ಲದವರೂ ಕೂಡ ಜ್ಯೋತಿಷ್ಯದ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ತಿಳಿಯೋಣ.

ಜನ್ಮ ಸಮಯದ ತಿದ್ದುಪಡಿ ವಿಧಾನ

ಇದು ಅತ್ಯಂತ ವೈಜ್ಞಾನಿಕ ಮತ್ತು ವೃತ್ತಿಪರ ವಿಧಾನವಾಗಿದೆ. ಜೀವನದಲ್ಲಿ ಈಗಾಗಲೇ ನಡೆದುಹೋಗಿರುವ ಪ್ರಮುಖ ಘಟನೆಗಳ ಆಧಾರದ ಮೇಲೆ ಗಣಿತದ ಲೆಕ್ಕಾಚಾರ ಹಾಕಿ ಜ್ಯೋತಿಷಿಗಳು ನಿಖರವಾದ ಹುಟ್ಟಿದ ಸಮಯವನ್ನು ಪತ್ತೆ ಮಾಡುತ್ತಾರೆ.

ಪ್ರಶ್ನ ಕುಂಡಲಿ ವಿಧಾನ

ಜನ್ಮ ದಿನಾಂಕ, ಸಮಯ ಎರಡೂ ಗೊತ್ತಿಲ್ಲದಿದ್ದರೆ ಈ ವಿಧಾನ ರಾಮಬಾಣ. ನೀವು ಯಾವ ಸಮಯದಲ್ಲಿ ಜ್ಯೋತಿಷಿಗಳ ಬಳಿ ಹೋಗಿ ನಿಮ್ಮ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳುತ್ತೀರೋ, ಆ ನಿಖರವಾದ ಸಮಯ ಮತ್ತು ಗ್ರಹಗಳ ಸ್ಥಾನವನ್ನು ಆಧರಿಸಿ ತಕ್ಷಣವೇ ಒಂದು ಕುಂಡಲಿಯನ್ನು ಸಿದ್ಧಪಡಿಸಲಾಗುತ್ತದೆ. ನಿಮ್ಮ ಪ್ರಸ್ತುತ ಸಮಸ್ಯೆ ಮತ್ತು ಅದಕ್ಕೆ ಇರುವ ಪರಿಹಾರವನ್ನು ಈ ವಿಧಾನದ ಮೂಲಕ ಅತ್ಯಂತ ನಿಖರವಾಗಿ ಹೇಳಬಹುದು.

ಹಸ್ತಸಾಮುದ್ರಿಕಾ ಶಾಸ್ತ್ರ

ಹಸ್ತಸಾಮುದ್ರಿಕೆಗೆ ಯಾವುದೇ ಜನ್ಮ ದಿನಾಂಕ ಅಥವಾ ಸಮಯದ ಅಗತ್ಯವಿರುವುದಿಲ್ಲ. ಅಂಗೈಯಲ್ಲಿರುವ ಆಯುಷ್ಯ ರೇಖೆ, ಬುದ್ಧಿ ರೇಖೆ, ಭಾಗ್ಯ ರೇಖೆ ಮತ್ತು ಹೃದಯ ರೇಖೆಗಳ ಆಧಾರದ ಮೇಲೆ ನಿಮ್ಮ ಸ್ವಭಾವ, ಆರೋಗ್ಯ, ಆರ್ಥಿಕ ಸ್ಥಿತಿ ಹಾಗೂ ಭವಿಷ್ಯದ ಏಳುಬೀಳುಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ನಾಮ ನಕ್ಷತ್ರ ಮತ್ತು ಸಂಖ್ಯಾಶಾಸ್ತ್ರ

ಜನ್ಮ ರಾಶಿ ಗೊತ್ತಿಲ್ಲದಿದ್ದರೆ, ನಿಮ್ಮನ್ನು ಸದ್ಯ ಕರೆಯುವ ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ರಾಶಿಯನ್ನು ನಿರ್ಧರಿಸಿ ದೈನಂದಿನ ಅಥವಾ ವಾರ್ಷಿಕ ಭವಿಷ್ಯವನ್ನು ನೋಡಬಹುದು.
ಕೇವಲ ಜನ್ಮ ದಿನಾಂಕ ಮಾತ್ರ ಗೊತ್ತಿದ್ದು ಸಮಯ ಗೊತ್ತಿಲ್ಲದಿದ್ದರೆ, ಮೂಲಾಂಕ ಮತ್ತು ಭಾಗ್ಯಾಂಕಗಳ ಲೆಕ್ಕಾಚಾರದ ಮೂಲಕ ನಿಮ್ಮ ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ವೃತ್ತಿ ಜೀವನವನ್ನು ಅರಿಯಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !