ಸಾಲಿಡ್ ಫುಡ್ ತಿನ್ನೋದಕ್ಕೆ ಮಗು ತಯಾರಿದೆ ಎಂದು ತಿಳಿಯೋದು ಹೇಗೆ, 6 ತಿಂಗಳ ನಂತರ ಈ ಎಲ್ಲಾ ಆಹಾರ ನೀಡಿ..

ಆರು ತಿಂಗಳ ನಂತರ ಮಗುವಿಗೆ ಸಾಲಿಡ್ ಫುಡ್ ಆರಂಭಿಸಲು ವೈದ್ಯರು ಸಲಹೆ ನೀಡುತ್ತಾರೆ. ಸಾಲಿಡ್ ಫುಡ್ ಎಂದರೆ ಏನೆನೆಲ್ಲಾ ತಿನ್ನಬಹುದು.. ಮಗು ಆಹಾರ ತಿನ್ನಲು ತಯಾರಿದೆ ಎಂದು ತಿಳಿದೋದು ಹೇಗೆ?

ಲಕ್ಷಣಗಳು

ಮಗುವಿನ ಕತ್ತು ಹಾಗೂ ತಲೆ ನಿಂತಿರಬೇಕು, ಆಹಾರ ನುಂಗುವ ಶಕ್ತಿ ಮಗುವಿಗೆ ಬರಬೇಕು

ಇನ್ನೊಬ್ಬರ ಸಹಾಯದಿಂದ ಅಥವಾ ತಂತಾನೇ ಕೂರಲು ಮಗುವಿಗೆ ಬರಬೇಕು

ನೀವು ತಿನ್ನುವಾಗ ಮಗು ನಿಮ್ಮ ತಟ್ಟೆಯನ್ನು ನೋಡಿ, ಆಹಾರದ ಮೇಲೆ ಆಸಕ್ತಿ ತೋರಿಸಬೇಕು

ಬಾಯಿಯ ಹತ್ತಿರ ಆಹಾರ ತಂದಾಗ ಮಗು ಬಾಯ್ತೆರೆಯಬೇಕು

ಹಾಲು ಕುಡಿಸಿದ ನಂತರವೂ ಮಗುವಿಗೆ ಹಸಿವು ಆಗಬೇಕು

ಯಾವ ಯಾವ ಆಹಾರ ಕೊಡಬಹುದು

ರಾಗಿ ಸೆರಿ
ಬಾಳೆಹಣ್ಣು, ಸೇಬು
ಅನ್ನದ ಗಂಜಿ
ಕ್ಯಾರೆಟ್
ಅವಕ್ಯಾಡೊ
ಪಪಾಯ
ಸಪೋಟ
ಓಟ್ಸ್

ತಿನ್ನಿಸಲು ಕೆಲವು ಸಲಹೆಗಳು

ಗ್ಲಾಸ್ ಅಥವಾ ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳಲ್ಲಿ ಮಗುವಿನ ಆಹಾರ ನೀಡಿ, ಪ್ಲಾಸ್ಟಿಕ್ ಬಳಕೆ ಬೇಡ.

ಒಂದು ಬಾರಿಗೆ ಒಂದು ಹಣ್ಣು ನೀಡಿದರೆ, 15 ದಿನ ಅದನ್ನೇ ನೀಡಿ, ನಂತರ ಬೇರೆ ಹಣ್ಣು ನೀಡಿ.

ಜನರಿಲ್ಲದ ಜಾಗದಲ್ಲಿ ಮಗುವಿಗೆ ಆಹಾರ ತಿನ್ನಿಸಿ, ಮಗುವಿಗೆ ಊಟದ ಮೇಲೆ ಆಸಕ್ತಿ ಬರಿಸಿ

ಮೊಬೈಲ್ ಲ್ಯಾಪ್‌ಟಾಪ್ ತೋರಿಸುತ್ತಾ ಊಟ ಕೊಡಬೇಡಿ

ಬಾಟಲಿ ಹಾಲು ನೀಡಿ ಅಭ್ಯಾಸ ಇಲ್ಲದಿದ್ದರೆ ಸೀದ ಲೋಟದಲ್ಲೇ ನೀರು ಕುಡಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!