ಅಕ್ರಮ ಕಟ್ಟಡಗಳ ತೆರವು: ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ದಂಪತಿ, ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಬೆಂಗಳೂರಿನಲ್ಲಿ ಅಕ್ರಮ ಕಟ್ಟೆಗಳ ತೆರವಿಗೆ ಬಿಬಿಎಂಪಿ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಕೆ.ಆರ್.ಪುರಂನಲ್ಲಿ ಪಾಲಿಕೆ ಅಧಿಕಾರಿಗಳು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲು ಬುಲ್ಡೋಜರ್‌ಗಳ ಸಮೇತ ಕಾರ್ಯಾಚರಣೆಗಿಳಿದಿವೆ. ಮನೆಯೊಂದರ ಬಳಿ ತೆರಳಿ ಕೆಡವಲು ಮುಂದಾದಾಗ ಆ ಮನೆಯ ಮಾಲೀಕರು ನಮ್ಮ ಮನೆ ಕೆಡವಬೇಡಿ, ಕಡೆವಿದರೆ ಸಾಯುವುದಾಗಿ ಬೆದರಿಕೆ ಹಾಕಿದ್ದಾರೆ.

ಅಧಿಕಾರಿಗಳು ಯಾವುದಕ್ಕೂ  ಬಗ್ಗದೆ ತಮ್ಮ ಕೆಲಸವನ್ನು ಮುಂದುವರೆಸಿದರು. ಆಗ ಮನೆಯ ಹೊರಗಿನ ಗೋಡೆಯ ಬಳಿ ತೆರಳಿ ದಂಪತಿ ದೇಹಕ್ಕೆ ಪೆಟ್ರೋಲ್ ಸುರಿದುಕೊಂಡು ಹೈಡ್ರಾಮಾ ಮಾಡಿದ್ದಾರೆ. ಕೂಡಲೇ ದಂಪತಿ ಮೇಲೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನೀರು ಸುರಿದು ಅವರನ್ನು ವಶಕ್ಕೆ ಪಡೆದು ಕಟ್ಟಡವನ್ನು ತೆರವುಗೊಳಿಸಿದರು.

ಈ ದಂಪತಿ ಮನೆ ನಿರ್ಮಾಣದಿಂದ 2 ಮೀಟರ್​ನಷ್ಟು ರಾಜಕಾಲುವೆ ಒತ್ತುವರಿಯಾಗಿದೆ ಎಂದು ಗುರುತಿಸಲಾಗಿದೆ. ಒತ್ತುವರಿ ಆಗಿರುವ ಸ್ಥಳದಲ್ಲಿ ಕಟ್ಟಡದ ಕಂಬವೂ ಇದೆ. ಕಂಬ ಬಿದ್ದರೆ ಇಡೀ ಕಟ್ಟಡ ಉರುಳುವ ಭೀತಿಯಿಂದ ಹೀಗೆ ಮಾಡಿದ್ದಾರೆ.  15 ವರ್ಷಗಳ ಹಿಂದೆ 40 ಲಕ್ಷ ಸಾಲ ರೂಪಾಯಿ ಸಾಲ ಮಾಡಿ ಈ ಮನೆ ಕಟ್ಟಿಕೊಂಡಿದ್ದೇವೆ. ಲಾಕ್​ಡೌನ್ ಸಮಯದಿಂದ ಕೆಲಚವಿಲ್ಲದ ಎಕಂಗಾಲಾಗಿದ್ದೇವೆ ಇರುವ ಮನೆ ಕಳೆದುಕೊಂಡು ಎಲ್ಲಿಗೆ ಹೋಗುವುದು. ನಮ್ಮ ಮನೆ ಕೆಡವಲು ಬಿಡುವುದಿಲ್ಲ ಎಂದು ದಂಪತಿ ಆತ್ಮಹತ್ಯೆಗೆ ಯತ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!