FOOD | ಟೇಸ್ಟಿ ಮಸಾಲೆ ದೋಸೆ ಹೇಗೆ ಮಾಡೋದು? ಹೊಟೇಲ್‌ಗಿಂತ ರುಚಿ,ಶುಚಿಯಾಗಿ ಹೀಗೆ ಮಾಡಿ..

ಅಕ್ಕಿ ಉದ್ದಿನಬೇಳೆ ಕಡ್ಲೆಬೇಳೆ ಮೆಂತ್ಯೆಯನ್ನು ನೆನೆಸಿ ರುಬ್ಬಿ ಇಟ್ಟುಕೊಳ್ಳಿ, ರುಬ್ಬುವಾಗಲೇ ಉಪ್ಪು ಹಾಕಿ, ರಾತ್ರಿಯೇ ಸೋಡಾಪುಡಿ ಹಾಕಿ ಇಡಿ ಬೆಳಗ್ಗೆ ಹಿಟ್ಟು ಉಬ್ಬುತ್ತದೆ.

ಪಲ್ಯಕ್ಕಾಗಿ ಆಲೂಗಡ್ಡೆ ಬೇಯಿಸಿ ಈರುಳ್ಳಿ, ಹಸಿಮೆಣಸಿನ ಒಗ್ಗರಣೆ ನೀಡಿ ಆಲೂ ಮಿಕ್ಸ್‌ ಮಾಡಿ ಇಡಿ

ನಂತರ ಚಟ್ನಿಗಾಗಿ ಶೇಂಗಾ, ಹಸಿಮೆಣಸು, ಕರಿಬೇವು ಹುರಿದುಕೊಳ್ಳಿ. ನಂತರ ಇದಕ್ಕೆ ಕಾಯಿ, ಕಡ್ಲೆ ಬೆಳ್ಳುಳ್ಳಿ, ಶುಂಠಿ, ಉಪ್ಪು ಹಾಗೂ ಕೊತ್ತಂಬರಿ ಹಾಕಿ ಮಿಕ್ಸಿ ಮಾಡಿ

ಕೆಂಪು ಚಟ್ನಿಗಾಗಿ ಬಿಸಿ ನೀರಿನಲ್ಲಿ ನೆನೆಸಿಟ್ಟ ಒಣಮೆಣಸು ಹಾಕಿ, ಜೊತೆಗೆ ಬೆಳ್ಳುಳ್ಳಿ, ಹುಣಸೆಹುಳಿ, ಜೀರಿಗೆ ಹಾಗೂ ಉಪ್ಪು ಹಾಕಿ ರುಬ್ಬಿ.

ಕಾದ ಹೆಂಚಿನ ಮೇಲೆ ಎಣ್ಣೆ ಹಾಕಿ ದೋಸೆ ಹಿಟ್ಟು ಹರಡಿ, ನಂತರ ಮೇಲೆ ಖಾರದಚಟ್ನಿ ಹಾಕಿ
ನಂತರ ತುಪ್ಪ ಹಾಕಿ ರೋಸ್ಟ್‌ ಮಾಡಿ, ಪಲ್ಯ ಮಧ್ಯಕ್ಕಿಟ್ಟು ಚಟ್ನಿ ಜೊತೆ ಸವಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!