ಬೀದರ್‌ನಲ್ಲಿ ಭಾರೀ ಮಳೆ, ಸಿಡಿಲು ಬಡಿದು ಮಹಿಳೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದ ಜನತೆಗೆ ವರ್ಷಧಾರೆ ತಂಪೆರೆದಿದೆ. ಆದರೆ ಬೀದರ್‌ ಜಿಲ್ಲೆಯಲ್ಲಿ ಅತಿಯಾಗಿ ಮಳೆಯಾಗುತ್ತಿದ್ದು, ಸಿಡಿಲು ಬಡಿದು ಮಹಿಳೆ ಮೃತಪಟ್ಟಿದ್ದಾರೆ.

ಬರೂರು ಗ್ರಾಮದಲ್ಲಿರುವ ಜಮೀನಿಗೆ ತೆರಳಿದ್ದ ವೇಳೆ ಪುಷ್ಪಲತಾ ಎನ್ನುವವರಿಗೆ ಸಿಡಿಲು ಬಡಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಮೀನಿಗೆ ಹೋಗುವಾಗ ಮಳೆ ಇರಲಿಲ್ಲ. ಕೆಲ ಸಮಯದ ನಂತರ ಮಳೆ ಜೋರಾಗಿದೆ. ಗುಡುಗು, ಮಿಂಚು ಸಹಿತ ಜೋರು ಮಳೆಯಾಗಿದ್ದು, ಏಕಾಏಕಿ ಸಿಡಿಲು ಬಡಿದು ಪುಷ್ಪಲತಾ ಮೃತಪಟ್ಟಿದ್ದಾರೆ.

ಔರಾದ್, ಕಮಲನಗರ, ಭಾಲ್ಕಿ ತಾಲೂಕಿನಲ್ಲಿ‌ ಧಾರಾಕಾರ ಮಳೆ ಸುರಿದರೆ, ಬಸವಕಲ್ಯಾಣ, ಹುಮನಾಬಾದ್‌, ಚಿಟಗುಪ್ಪಾ ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಬಿಸಿಲ ಧಗೆಗೆ ತತ್ತರಿಸಿದ್ದ ಬೀದರ್ ಜನರಿಗೆ ಮಳೆ ತಂಪೆರೆದಿದೆ. ನಿನ್ನೆ ರಾತ್ರಿಯಿಂದ ಜಿಲ್ಲೆಯಾದ್ಯಂತ ಗಡುಗು‌ ಸಹಿತ ಧಾರಾಕಾರ ಮಳೆ ಸುರಿದಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!