ಗರ್ಭಿಣಿಯರ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುವುದು ಹೇಗೆ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿನಕಳೆದಂತೆ ಗರ್ಭಿಣಿಯರಿಗೆ ನಿದ್ರಾಹೀನತೆ ಹೆಚ್ಚಾಗಿ ಕಾಡುತ್ತದೆ. ಇತ್ತೀಚಿಗೆ ಅರ್ಧಕ್ಕಿಂತ ಹೆಚ್ಚು ಗರ್ಭಿಣಿಯರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನವೊಂದು ಹೇಳಿದೆ. ನಿದ್ರಾಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು ಗರ್ಭಿಣಿಯರು ಸೂಕ್ತವಾದ ದಿನಚರಿಯನ್ನು ರೂಪಿಸಿಕೊಳ್ಳಬೇಕು. ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಸೆಲ್ ಫೋನ್, ಕಂಪ್ಯೂಟರ್ ಮತ್ತು ಟಿವಿಯನ್ನು ತಪ್ಪಿಸಿ. ಸಾಧ್ಯವಾದರೆ ಪುಸ್ತಕವನ್ನು ಓದಿ, ಹೀಗೆ ಮಾಡುವುದರಿಂದ ಬೇಗನೆ ನಿದ್ದೆ ಬರುವ ಸಾಧ್ಯತೆ ಇರುತ್ತದೆ. ಬೆನ್ನು ಕೆಳಗೆ ಮಾಡಿ ಮಲಗುವುದಕ್ಕಿಂತ ಪಕ್ಕಕ್ಕೆ ತಿರುಗು ಮಲಗಿದರೆ ಒಳಿತು.

ಉಸಿರಾಟದ ತೊಂದರೆಗಳನ್ನು ತಡೆಗಟ್ಟಲು ದಿಂಬನ್ನು ಪಾದದ ಕೆಳಗೆ ಎತ್ತರವಾಗಿ ಜೋಡಿಸಿ ಮಲಗಬೇಕು. ಊಟವಾದ ಬಳಿಕ  ಸ್ವಲ್ಪ ದೂರ ನಡೆಯಬೇಕು. ವೈದ್ಯರ ಸೂಚನೆ ಮತ್ತು ಸಲಹೆಯನ್ನು ಪಡೆದು ಅಗತ್ಯವಿದ್ದಲ್ಲಿ ಸಣ್ಣಪುಟ್ಟ ವ್ಯಾಯಾಮ, ಯೋಗಾಸನಗಳನ್ನು ಮಾಡುವುದು ಸೂಕ್ತ. ಹೀಗೆ ಮಾಡುವುದರಿಂದ ರಾತ್ರಿ ಶಾಂತಿಯುತವಾಗಿ ನಿದ್ರಿಸಬಹುದು.

ದಿನವಿಡೀ ಸಾಕಷ್ಟು ನೀರು ಕುಡಿಯಿರಿ ಆದರೆ ಮಲಗುವ ಸಮಯ ಹತ್ತಿರವಾದಂತೆ ನೀರನ್ನು ಕಡಿಮೆ ಮಾಡಿ. ಮಲಗುವ ಮುನ್ನ ನೀರು ಕುಡಿಯುವುದರಿಂದ ಮೂತ್ರ ವಿಸರ್ಜನೆಗೆ ಹೆಚ್ಚಾಗಿ ಎಚ್ಚರವಾಗುತ್ತದೆ. ಎಣ್ಣೆಯುಕ್ತ ಆಹಾರ ಮತ್ತು ಮಸಾಲೆಯುಕ್ತ ಆಹಾರಗಳಿಂದ ದೂರವಿರುವುದು ಉತ್ತಮ. ಇಂತಹ ಆಹಾರಗಳು ಎದೆಯುರಿ ಉಂಟುಮಾಡಬಹುದು. ಇದು ರಾತ್ರಿಯಲ್ಲಿ ನಿದ್ರಾಹೀನತೆಗೆ ಕಾರಣವಾಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!