ಪ್ರೊಟೀನ್‌ ಲಡ್ಡು ತಯಾರಿಸುವುದು ಎಷ್ಟು ಈಸಿ ಗೊತ್ತಾ…

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಸ್ತುತ ದೇಶಾದ್ಯಂತ ಕರೋನಾ ವೈರಸ್ ಮತ್ತು ಓಮಿಕ್ರಾನ್ ರೂಪಾಂತರ ಹರಡುವಿಕೆ ಹೆಚ್ಚುತ್ತಿದೆ. ವೈದ್ಯರು ಪ್ರೊಟೀನ್‌ಯುಕ್ತ ಆಹಾರ ಸೇವಿಸುವಂತೆ ಸಲಹೆ ನೀಡುತ್ತಾರೆ. ಹೆಚ್ಚಿನ ಪ್ರೊಟೀನ್ ಹೊಂದಿರುವ ಪಾಕವಿಧಾನದವೊಂದರ ಬಗ್ಗೆ ತಿಳಿಯೋಣ. ದೇಹಕ್ಕೆ ಹೆಚ್ಚಿನ ಶಕ್ತಿ, ಚೈತನ್ಯ ನೀಡುವ ಪ್ರೋಟೀನ್ ಲಡ್ಡು ಮಾಡುವ ಪ್ರಕ್ರಿಯೆಯ ಹೇಗೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ..

ಬೇಕಾಗುವ ಸಾಮಗ್ರಿಗಳು..
ಕಡಲೆಕಾಳು – ಅರ್ಧ ಕಪ್, ಬಾದಾಮಿ – ಎರಡು ಚಮಚ, ಎಳ್ಳು – ಅರ್ಧ ಕಪ್, ಪಿಸ್ತಾ – ಎರಡು ಚಮಚ, ಕುಂಬಳಕಾಯಿ ಬೀಜ – ಎರಡು ಚಮಚ, ಸೂರ್ಯಕಾಂತಿ ಬೀಜ – ಎರಡು ಚಮಚ, ಒಣ ಕೊಬ್ಬರಿ – ಅರ್ಧ ಕಪ್, ಖರ್ಜೂರ ಅಂಜೂರ – ನಾಲ್ಕು, ಬೆಲ್ಲ – ಅರ್ಧ ಕಪ್‌, ಶುಚಿಯಾದ ನೀರು – ಒಂದು ಕಪ್

ಮಾಡುವ ವಿಧಾನ:
ಮೊದಲು ಒಲೆ ಆನ್ ಮಾಡಿ ಮತ್ತು ಪ್ಯಾನ್ ಒಲೆಯ ಮೇಲಿಡಿ. ಕಡಲೆಬೀಜ, ಎಳ್ಳು, ಪಿಸ್ತಾ, ಬಾದಾಮಿ, ಕುಂಬಳಕಾಯಿ ಬೀಜಗಳು ಮತ್ತು ಸೂರ್ಯಕಾಂತಿ ಬೀಜಗಳನ್ನು ಸೇರಿಸಿ. ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ಎಲ್ಲವನ್ನು ಮಿಶ್ರಣ ಮಾಡಿ ಮಿಕ್ಸಿಯಲ್ಲಿ ಪುಡಿ ಮಾಡಿ. ಅದು ಆರಿದ ಬಳಿಕ ತುರಿದ ತೆಂಗಿನಕಾಯಿ ಸೇರಿಸಿ. ನಂತರ ಖರ್ಜೂರ ಮತ್ತು ಅಂಜೂರದ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ದೊಡ್ಡ ಬಾಣಲೆ ತೆಗೆದುಕೊಂಡು ಬೆಲ್ಲ ಮತ್ತು ನೀರು ಹಾಕಿ ಚೆನ್ನಾಗಿ ಬೇಯಿಸಿ. ಬೆಲ್ಲದ ಕ್ಯಾರಮೆಲ್ ಸಿದ್ಧವಾದ ಕೂಡಲೇ ಮಿಶ್ರಣವನ್ನು ಅದರಲ್ಲಿ ಬೆರೆಸಿ. ಲಘುವಾಗಿ ಕಂದು ಬಣ್ಣ ಬರುವವರೆಗೆ ಬೇಯಿಸಿ ನಂತರ ಸ್ಟವ್ ಆಫ್ ಮಾಡಿ ಮತ್ತು ಮಿಶ್ರಣವನ್ನು ತಟ್ಟೆಗೆ ಸುರಿಯಿರಿ. ಸ್ವಲ್ಪ ತಣ್ಣಗಾದ ಬಳಿಕ ಲಡ್ಡು ರೀತಿಯಲ್ಲಿ ಉಂಡೆ ಮಾಡಿ..ಇವಿಷ್ಟಾದ ನಂತರ ಪ್ರೊಟೀನ್‌ ಲಡ್ಡು ಸವಿಯಲು ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!