ಹೊಟ್ಟೆಯಲ್ಲಿ ಕೆಜಿಗಟ್ಟಲೆ ಚಿನ್ನ ಬಚ್ಚಿಟ್ಟು ಸ್ಮಗ್ಲಿಂಗ್, ಈತ ಸಿಕ್ಕಿಬಿದ್ದಿದ್ದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಿರುವನಂತಪುರದ ಕರಿಪುರ ವಿಮಾನ ನಿಲ್ದಾಣದಲ್ಲಿ ಹೊಟ್ಟೆಯಲ್ಲಿ ಕೆಜಿಯಷ್ಟು ಚಿನ್ನದ ಕ್ಯಾಪ್ಸುಲ್‌ಗಳನ್ನು ಸ್ಮಗ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಮಲಪ್ಪುರ ಜಿಲ್ಲೆಯ ನಿವಾಸಿ ನೌಫಲ್ ತನ್ನ ಹೊಟ್ಟೆಯಲ್ಲಿ ನಾಲ್ಕು ಚಿನ್ನದ ಕ್ಯಾಪ್ಸುಲ್‌ಗಳನ್ನು ಸಾಗಿಸುತ್ತಿದ್ದ. ಆತ ಚಿನ್ನದ ಸ್ಮಗ್ಲಿಂಗ್ ಮಾಡುತ್ತಿದ್ದಾನೆ ಎನ್ನುವ ಮಾಹಿತಿ ಆಧರಿಸಿ ಏರ್‌ಪೋರ್ಟ್‌ನಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ.

ಆತನನ್ನು ಕೂಲಂಕಷವಾಗಿ ಪರೀಕ್ಷಿಸಲಾಗಿದೆ, ಬ್ಯಾಗ್‌ನಲ್ಲಿಯೂ ಏನೂ ಪತ್ತೆಯಾಗಿಲ್ಲ. ನಂತರ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಸ್ಕಾನ್‌ನಲ್ಲಿ ಕ್ಯಾಪ್ಸುಲ್ ಇರುವುದು ಕಂಡುಬಂದಿದೆ. ಈತ ತನ್ನ ಗುದನಾಳದಲ್ಲಿ ನಾಲ್ಕು ಕ್ಯಾಪ್ಸುಲ್‌ಗಳನ್ನು ಬಚ್ಚಿಟ್ಟುಕೊಂಡು ದುಬೈನಿಂದ ಬಂದಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!