ರಾಜ್ಯಗಳಿಂದಲೇ ಶುರುವಾಗಲಿ ನಗರ ಯೋಜನೆ ವಿಕೇಂದ್ರೀಕರಣ: ಮೋದಿ ಆಶಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ನಗರ ಯೋಜನೆಯ ವಿಕೇಂದ್ರೀಕರಣಕ್ಕೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಮಟ್ಟದಿಂದಲೇ ಈ ಯೋಜನೆ ಆಗಬೇಕು ಎಂದರು. ಸ್ಥಳೀಯ ಪಟ್ಟಣಗಳ ಅಭಿವೃದ್ಧಿಯಿಂದ ನಗರಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಪ್ರಧಾನಿ ಹೇಳಿದರು.

ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್‌ನ ಮೇಯರ್‌ಗಳು ಮತ್ತು ಉಪಮೇಯರ್‌ಗಳ ಕೌನ್ಸಿಲ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ವರ್ಷದ ಬಜೆಟ್‌ನಲ್ಲಿ ನಗರ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ, ನಗರ ಯೋಜನೆ ವಿಕೇಂದ್ರೀಕರಣವಾಗುವುದು ಅವಶ್ಯಕ. ದೆಹಲಿಯಿಂದ ಎಲ್ಲವೂ ಆಗುವುದಿಲ್ಲ, ರಾಜ್ಯಮಟ್ಟದಿಂದಲೇ ನಗರ ಯೋಜನೆ ಅಭಿವೃದ್ದಿಯಾಗಬೇಕೆಂದರು. ದೊಡ್ಡ ನಗರಗಳ ಸುತ್ತ ಅಭಿವೃದ್ಧಿ ಹೊಂದುತ್ತಿರುವ ಹಲವಾರು ಪಟ್ಟಣಗಳು ದೇಶದಲ್ಲಿವೆ. ಸ್ಥಳೀಯ ಮಟ್ಟದಿಂದಲೇ ಪಟ್ಟಣಗಳನ್ನು ಆಯಕಟ್ಟಿನ ರೀತಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕು. ಆಗ ಮಾತ್ರ ನಗರಗಳ ಮೇಲಿನ ಒತ್ತಡ ಕಡಿಮೆ ಅಗಲಿದೆ ಎಂಬ ಮಾತನ್ನು ಹೇಳಿದರು.

ಮೇಯರ್‌ಗಳು ತಳಮಟ್ಟದಿಂದ ಕೆಲಸ ಮಾಡುವ ಜವಾಬ್ದಾರಿಯನ್ನು ಹೊಂದಿರಬೇಕು ಎಂಬುದನ್ನು ಪ್ರಧಾನಿ ಮೋದಿ ನೆನಪಿಸಿದರು. ತಳಮಟ್ಟದಿಂದ ಕೆಲಸ ಮಾಡುವುದು ಎಲ್ಲಾ ಮೇಯರ್‌ಗಳ ಜವಾಬ್ದಾರಿಯಾಗಿದೆ. ಉತ್ತಮ ಸೌಲಭ್ಯಗಳನ್ನು ಒದಗಿಸಿ, ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಸಲಹೆಯಿತ್ತರು.

ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಮರಿಸಿದ ಪ್ರಧಾನಿ

ಅಹಮದಾಬಾದ್ ಪುರಸಭೆಯ ಸದಸ್ಯರಾಗಿದ್ದ ಮಾಜಿ ಗೃಹ ಸಚಿವ ದಿವಂಗತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಸ್ಮರಿಸಿದರು. ಅವರು ಮಾಡಿದ ಕಾರ್ಯವನ್ನು ಇಂದಿಗೂ ಗೌರವಿಸಲಾಗುತ್ತದೆ. ಅಹಮದಾಬಾದ್ ಅನ್ನು ಮೇಯರ್ ಆಗಿ ಮುನ್ನಡೆದ ಅವರು ಉಪ ಪ್ರಧಾನಿ ಹುದ್ದೆವರೆಗೂ ತಲುಪಿದರು. ಪುರಸಭೆಯಲ್ಲಿ ಅವರು ದಶಕಗಳ ಹಿಂದೆ ಮಾಡಿದ ಕೆಲಸವನ್ನು ಇಂದಿಗೂ ಗೌರವದಿಂದ ಸ್ಮರಿಸಲಾಗುತ್ತದೆ. ಉತ್ತಮ ಭಾರತಕ್ಕಾಗಿ ಅವರ ಮಾರ್ಗವನ್ನು ಅನುಸರಿಸಬೇಕು ಮತ್ತು ಅದರ ಅಭಿವೃದ್ಧಿಗಾಗಿ ಶ್ರಮಿಸಬೇಕು. ಎಲ್ಲಾ ಮೇಯರ್‌ಗಳು ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ಪ್ರಯಾಸ್ ಅನ್ನು ಅನುಸರಿಸಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!